-->

ಮಾಜಿ ನೀಲಿಚಿತ್ರ ತಾರೆ ಸನ್ನಿ ಲಿಯೋನ್​ ವಿರುದ್ಧ ಮಥುರಾ ಅರ್ಚಕರು ಗರಂ: ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದಲ್ಲಿ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ

ಮಾಜಿ ನೀಲಿಚಿತ್ರ ತಾರೆ ಸನ್ನಿ ಲಿಯೋನ್​ ವಿರುದ್ಧ ಮಥುರಾ ಅರ್ಚಕರು ಗರಂ: ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದಲ್ಲಿ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ

ಲಖನೌ: ಮಾಜಿ ನೀಲಿಚಿತ್ರ ತಾರೆ ಹಾಗೂ ಬಾಲಿವುಡ್ ಬ್ಯೂಟಿ ಕ್ವೀನ್ ಸನ್ನಿ ಲಿಯೋನ್​ ವಿರುದ್ಧ ಉತ್ತರ ಪ್ರದೇಶದ ಮಥುರಾ ಮೂಲದ ಅರ್ಚಕರು ಗರಂ ಆಗಿದ್ದು, ಅವರದ್ದೊಂದು ಇತ್ತೀಚಿನ ವೀಡಿಯೋ ಆಲ್ಬಮ್​ ಅನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

'ಮಧುಬನ ಮೇ ರಾಧಿಕಾ ನಾಚೇ' ಎಂಬ ಹಾಡಿಗೆ ಸನ್ನಿ ಲಿಯೋನ್​ ಅಶ್ಲೀಲವಾಗಿ ಡ್ಯಾನ್ಸ್​ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ‌. ತಕ್ಷಣ ಈ ವೀಡಿಯೋ ಸಾಂಗ್​ ಅನ್ನು ಬ್ಯಾನ್​ ಮಾಡಬೇಕು. ಈ ವೀಡಿಯೋ ಆಲ್ಬಂ ಬ್ಯಾನ್​ ಮಾಡಿ, ಸನ್ನಿ ಲಿಯೋನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯದ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಬೃಂದಾವನದ ಸಂತ ನಾವಲ್​ ಗಿರಿ ಮಹಾರಾಜ್​ ಎಚ್ಚರಿಕೆ ನೀಡಿದ್ದಾರೆ. 

ಅಲ್ಲದೆ ಸನ್ನಿ ಲಿಯೋನ್​ ಕೂಡಾ ಈ ದೃಶ್ಯವನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡದಿದ್ದಲ್ಲಿ ಆಕೆಯನ್ನು ಭಾರತದಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದಾರೆ. ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಕೂಡ ಸನ್ನಿ ಲಿಯೋನ್ ಡ್ಯಾನ್ಸ್ ವೀಡಿಯೋ ವಿರುದ್ಧ ಕಿಡಿಕಾರಿದ್ದಾರೆ. ಅವಹೇಳನಕಾರಿ ರೀತಿಯಲ್ಲಿ ಈ ಹಾಡನ್ನು ಪ್ರಸ್ತುತಿ ಮಾಡುವ ಮೂಲಕ ಬ್ರಿಜ್​ಭೂಮಿಯ ಪ್ರತಿಷ್ಠೆಯನ್ನು ಕೆಡಿಸಿದ್ದಾರೆ ಎಂದಿದ್ದಾರೆ. 

ಮೂಲತಃ ಈ ಹಾಡನ್ನು 1960ರಲ್ಲಿ ತೆರೆಕಂಡ 'ಕೊಹಿನೂರ್' ಸಿನಿಮಾಕ್ಕಾಗಿ ಮೊಹಮ್ಮದ್ ರಫಿಯವರು ಹಾಡಿದ್ದರು. ಸರೆಗಮ ಮ್ಯೂಸಿಕ್ ಬುಧವಾರವಷ್ಟೇ ತನ್ನ ಇತ್ತೀಚಿನ ಮಧುಬನ್ ಎಂಬ ಶೀರ್ಷಿಕೆಯಲ್ಲಿ ಈ ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಹಾಡನ್ನು ಕನಿಕಾ ಕಪೂರ್ ಮತ್ತು ಅರಿಂದಮ್ ಚಕ್ರವರ್ತಿ ಹಾಡಿದ್ದು, ಪಾರ್ಟಿ ಸಾಂಗ್​ನಲ್ಲಿ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾರೆ. ಈ ಹಾಡು ಶ್ರೀಕೃಷ್ಣ ಹಾಗೂ ರಾಧೆಯ ನಡುವಣ ಪ್ರೇಮದ ವಿಷಯದ ಮೇಲೆ ರಚನೆಯಾಗಿರುವುದರಿಂದ ನೆಟ್ಟಿಗರು ಕೂಡ ಹಿಂದು ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.

Ads on article

Advertise in articles 1

advertising articles 2

Advertise under the article