-->
ಮನೆ ಬಿಟ್ಟು ತವರು ಮನೆಗೆ ಹೋಗಿರುವ ಪತ್ನಿ ವಾಪಸ್ ಆಗಿಲ್ಲವೆಂದು ಪತಿ ಆತ್ಮಹತ್ಯೆ

ಮನೆ ಬಿಟ್ಟು ತವರು ಮನೆಗೆ ಹೋಗಿರುವ ಪತ್ನಿ ವಾಪಸ್ ಆಗಿಲ್ಲವೆಂದು ಪತಿ ಆತ್ಮಹತ್ಯೆ

ಬೆಂಗಳೂರು: ಮನಸ್ತಾಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಪತ್ನಿಯು ವಾಪಸ್​ ಬರಲು ಹೇಳಿದರೂ ಮರಳದಿದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಇಟ್ಟಮಡುವಿನ ಮಾರುತಿ ನಗರದಲ್ಲಿ ನಡೆದಿದೆ. 

ಬೆಂಗಳೂರಿನ ಇಟ್ಟಮಡುವಿನ ಮಾರುತಿ ನಗರ ನಿವಾಸಿ ನವೀನ್​ ಕುಮಾರ್​ (33) ಎಂಬಾತ ಆತ್ಮಹತ್ಯೆ.

ನವೀನ್ ಆರು ವರ್ಷಗಳ ಹಿಂದೆ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದ. ವೈವಾಹಿಕ ಜೀವನದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿ ಮಧ್ಯೆ ಇತ್ತೀಚೆಗೆ ಭಿನ್ನಾಭಿಪ್ರಾಯ ಮೂಡಿತ್ತು.

ಇದರಿಂದ ಇಬ್ಬರ ನಡುವೆ ಮನಸ್ತಾಪ ಮೂಡಿ ಜಗಳ ನಡೆದಿತ್ತು. ಇದೇ ಗಲಾಟೆಯಿಂದ ಬೇಸರಗೊಂಡ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಪತ್ನಿಗೆ ಮನೆಗೆ ಮರಳುವಂತೆ ಕೋರಿದ್ದರೂ ಆಕೆ ಬರಲಿಲ್ಲ. ಪತ್ನಿಗೆ ಕರೆ ಮಾಡಿ ಮನೆಗೆ ವಾಪಸ್​ ಬರುವಂತೆ ಕೇಳಿಕೊಂಡರೂ ಆಕೆ ಬಂದಿರಲಿಲ್ಲ. ಇದರಿಂದ ತೀವ್ರವಾಗಿ ಮನನೊಂದ ನವೀನ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article