
ಪತಿಯೊಂದಿಗೆ ಜಗಳ ಕಾಯ್ದುಕೊಂಡು ತವರು ಮನೆ ಸೇರಿದ ಯುವತಿ ಮತ್ತೊಬ್ಬನೊಂದಿಗೆ ದುರಂತ ಅಂತ್ಯವಾದಳು!
12/13/2021 07:11:00 AM
ರಾಮನಗರ: ಪತಿಯೊಂದಿಗೆ ಜಗಳ ಕಾಯ್ದುಕೊಂಡು ತವರು ಮನೆ ಸೇರಿದ್ದ ಯುವತಿಯೋರ್ವಳು ತನ್ನ ಊರಿನ ವ್ಯಕ್ತಿಯೊಂದಿಗೆ ದುರಂತ ಅಂತ್ಯ ಕಂಡ ಘಟನೆ ಮಾಗಡಿ ತಾಲೂಕಿನ ದಾಸೇಗೌಡನಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ.
ಬ್ಯಾಲಕೇರಿ ಗ್ರಾಮದ ಶ್ರೀನಿವಾಸ್(35) ಹಾಗೂ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾ(32) ಮೃತ ದುರ್ದೈವಿಗಳು.
ಬ್ಯಾಲಕೇರಿ ಗ್ರಾಮದ ಗೆಂಡಯ್ಯ ಎಂಬುವರೊಂದಿಗೆ 6 ವರ್ಷಗಳ ಹಿಂದೆ ಪುಷ್ಪಲತಾಗೆ ಮದುವೆ ನಡೆದಿತ್ತು. ವಾರದ ಹಿಂದೆ ಪತಿಯೊಂದಿಗೆ ಜಗಳ ಕಾಯ್ದುಕೊಂಡ ಪುಷ್ಪಲತಾ, ದಾಸೇಗೌಡನಪಾಳ್ಯದ ತನ್ನ ತವರು ಮನೆಯನ್ನು ಸೇರಿಕೊಂಡಿದ್ದರು.
ದಾಸೇಗೌಡನಪಾಳ್ಯದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದ ಬ್ಯಾಲಕೇರಿಯ ಶ್ರೀನಿವಾಸ್ ಹಾಗೂ ಪುಷ್ಪಲತಾ ನಡುವೆ ಪ್ರೀತಿ ಮೊಳೆತ್ತಿತ್ತು. ಶ್ರೀನಿವಾಸ್ಗೂ ಬೇರೆ ಮದುವೆಯಾಗಿದ್ದು, ಒಂದು ಮಗು ಕೂಡಾ ಇದೆ. ಅಲ್ಲದೆ ಶ್ರೀನಿವಾಸ್ ಪತ್ನಿ 2ನೇ ಮಗುವಿನ ಗರ್ಭಿಣಿಯೂ ಆಗಿದ್ದರು. ಆತನಿಗೂ ಮದುವೆಯಾಗಿ ಪತ್ನಿ, ಮಗುವಿದ್ದರೂ ಪುಷ್ಪಲತಾಳ ಮೇಲೆ ಪ್ರೀತಿ ಹುಟ್ಟಿತ್ತು. ಪತಿಯಿದ್ದರೂ ಪುಷ್ಪಲತಾ, ಶ್ರೀನಿವಾಸ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಒಟ್ಟಿಗೆ ವಾಸಿಸುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಫೋನ್ ನಲ್ಲಿಯೇ ಮಾತನಾಡಿದ್ದ ಪ್ರೇಮಿಗಳು, ಸಂಜೆ ಒಟ್ಟಿಗೆ ಭೇಟಿಯಾಗಲು ಗ್ರಾಮದ ಹೊರವಲಯಕ್ಕೆ ಹೋಗಿದ್ದಾರೆ. ಆದರೆ ಅದೇನಾಯ್ತೋ ಮೊದಲು ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಪುಷ್ಪಾಲತಾಳ ಮೃತದೇಹವನ್ನು ಕೆಳಗಿಸಿ ಬಳಿಕ ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.