-->
ವಿಜಯ್ ದೇವರಕೊಂಡ ಶ್ರೇಷ್ಠ ನಟ ಮಾತ್ರವಲ್ಲ 'ನಿಜಕ್ಕೂ ತುಂಬಾ ಹಾಟ್' ಎಂದು ಕೊಂಡಾಡಿದ ಸಾರಾ ಅಲಿ ಖಾನ್

ವಿಜಯ್ ದೇವರಕೊಂಡ ಶ್ರೇಷ್ಠ ನಟ ಮಾತ್ರವಲ್ಲ 'ನಿಜಕ್ಕೂ ತುಂಬಾ ಹಾಟ್' ಎಂದು ಕೊಂಡಾಡಿದ ಸಾರಾ ಅಲಿ ಖಾನ್

ಮುಂಬೈ: 'ಅತ್ರಂಗಿ ರೇ' ಸಿನಿಮಾ ಮೂಲಕ ನಟಿ ಸಾರಾ ಅಲಿ ಖಾನ್​ ಅವರು ಧನುಷ್​ ಹಾಗೂ ಅಕ್ಷಯ್ ಕುಮಾರ್​ ರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಥಿಯೇಟರ್ ಅಲ್ಲದೆ, ಡಿಸ್ನಿ ಹಾಟ್​ಸ್ಟಾರ್​ ಮೂಲಕ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಲಿದೆ. ಈ ಸಿನಿಮಾ ಡಿಸೆಂಬರ್​ 24ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಮೂವರನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ​ 

ಊ ರೊಮ್ಯಾಂಟಿಕ್​ ಸಿನಿಮಾದಲ್ಲಿ ಸಾರಾ ಅಲಿ ಖಾನ್​ ನಾಯಕಿಯಾಗಿದ್ದರೆ, ಧನುಷ್​ ಹಾಗೂ ಅಕ್ಷಯ್​ ಕುಮಾರ್ ನಾಯಕಿಯನ್ನು ಪ್ರೀತಿಯ ಬಲೆ ಬೀಳಿಸಿಕೊಳ್ಳಲು ಯತ್ನಿಸುವ ಪೈಪೋಟಿ ನಾಯಕರಾಗಿದ್ದಾರೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಭಾರೀ ಬಿಝಿಯಾಗಿದೆ. 

ಇದೇ ಸಿನಿಮಾ ಕಾರ್ಯಕ್ರಮ ನಿಮಿತ್ತ ಸಾರಾ ಅಲಿ ಖಾನ್ ಮಾಧ್ಯಮ ಸಂದರ್ಶನವೊಂದಲ್ಲಿ ಭಾಗವಹಿಸಿದ್ದರು. ಈ ವೇಳೆ ತೆಲುಗು ನಟ ವಿಜಯ್​ ದೇವರಕೊಂಡ​ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನುಡಿದು ಅಚ್ಚರಿಗೆ ಕಾರಣರಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾ ಹೀರೋಗಳ ಜತೆ ನಟಿಸುವುದಾದರೆ, ನೀವು ಯಾರೊಂದಿಗೆ ತೆರೆಹಂಚಿಕೊಳ್ಳಲು ಬಯಸುತ್ತೀರೆಂದು ಮಾಧ್ಯಮದ ಪ್ರಶ್ನೆಯೊಂದು ಸಾರಾಗೆ ಎದುರಾಗಿತ್ತು. ಈ ವೇಳೆ ಉತ್ತರಿಸಿದ ಅವರು 'ನಾನು ವಿಜಯ ದೇವರಕೊಂಡ ಜತೆಯಲ್ಲಿ ನಟಿಸಲು ಬಯಸುತ್ತೇನೆ' ಎಂದಿದ್ದಾರೆ. ಮತ್ತೆ ಮುಂದುವರಿದ ಸಾರಾ 'ಅವರೊರ್ವ ಶ್ರೇಷ್ಠ ನಟ. ಅವರು ಕೂಲ್​ ಮಾತ್ರವಲ್ಲ ನಿಜಕ್ಕೂ ತುಂಬಾ ಹಾಟ್' ಎನ್ನುವ ಮೂಲಕ ಬೋಲ್ಡ್​ ಕಾಮೆಂಟ್​ ಮಾಡಿದ್ದಾರೆ. 

ಈ ಹಿಂದೆಯೂ ಸಾರಾ ಅಲಿ ಖಾನ್ ನಟ ವಿಜಯ್​ ದೇವರಕೊಂಡ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಅರ್ಜುನ್​ ರೆಡ್ಡಿ ಸಿನಿಮಾ ಮೂಲಕ ಎಲ್ಲೆಡೆ ಮನೆ ಮಾತಾಗಿರುವ ವಿಜಯ್​ ದೇವರಕೊಂಡ ಇದೀಗ ಪೂರಿ ಜಗನ್ನಾಥ್​ ನಿರ್ದೇಶನದ “ಲೈಗರ್​” ಸಿನಿಮಾ ಮೂಲಕ ಬಾಲಿವುಡ್​‌ಅಂಗಳವನ್ನು ಪ್ರವೇಶಿಸಿದ್ದಾರೆ.

Ads on article

Advertise in articles 1

advertising articles 2

Advertise under the article