ನವದೆಹಲಿ: ಅಪ್ರಾಪ್ತ ಸೇರಿದಂತೆ ಮೂವರಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ನವದೆಹಲಿ: ಅಪ್ರಾಪ್ತನು ಸೇರಿದಂತೆ ಮೂವರು ಆರೋಪಿಗಳು 21 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವಾಯುವ್ಯ ದೆಹಲಿಯ ಬುಧ್ ವಿಹಾರ್ ಹಂತ-1 ರಲ್ಲಿ  ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಫ್ಯಾಕ್ಟರಿ ಮಾಲಕ ಉಮೇಶ್ ಮತ್ತು ಜಿಮ್ ಮಾಲಕ ಸುನೀಲ್ ಕುಮಾರ್ ವತ್ಸ್ ಅವರನ್ನು ಬಂಧಿಸಲಾಗಿದೆ. ಕಾನೂನಿಗೆ ಸಂಘರ್ಷಕ್ಕೊಳಗಾದ ಬಾಲಕನನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಂತ್ರಸ್ತೆ ಆರೋಪಿಯಾದ ಉಮೇಶ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಸುನೀಲ್ ಕುಮಾರ್ ವತ್ಸ್ ನ ಜಿಮ್‌ನಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರನ್ನೂ ಬಂಧಿಸಿರುವ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.