-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪ್ರೀತಿಸಿದವನನ್ನೇ ಮುದುವೆಯಾಗಲು ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೇಸ್ತು ಬಿದ್ದ ಪೊಲೀಸರು

ಪ್ರೀತಿಸಿದವನನ್ನೇ ಮುದುವೆಯಾಗಲು ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೇಸ್ತು ಬಿದ್ದ ಪೊಲೀಸರು

ನಾಗ್ಪುರ ​(ಮಹಾರಾಷ್ಟ್ರ): ಸಾಮೂಹಿಕ ಅತ್ಯಾಚಾರದ ಯುವತಿಗೆ ಶೀಘ್ರ ನ್ಯಾಯ ದೊರಕಿಸಲು ಹೋಗಿ ಸಾವಿರಾರು ಮಂದಿ ಸಿಬ್ಬಂದಿಯಿಂದ ತನಿಖೆ ನಡೆಸಲು ಹೋಗಿ ಕೊನೆಗೇ ಪೊಲೀಸರೇ ಬೇಸ್ತು ಬಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಈ ಘಟನೆಯಿಂದ ಪೊಲೀಸ್‌ ಇಲಾಖೆ ಮಾತ್ರವಲ್ಲದೇ ಸಾಮೂಹಿಕ ಅತ್ಯಾಚಾರದ ತನಿಖೆಗಿಳಿದ ಪೊಲೀಸ್ ಸಿಬ್ಬಂದಿಯೂ ಸುಸ್ತಾಗಿದ್ದಾರೆ. 

19 ವರ್ಷದ ಯುವತಿಯೋರ್ವಳು ತನ್ನ ಮೇಲೆ ಗ್ಯಾಂಗ್ ರೇಪ್ ಆದ ಬಗ್ಗೆ  ಪೊಲೀಸ್ ದೂರು ದಾಖಲು ಮಾಡಿದ್ದಾಳೆ. ನಾಗ್ಪುರ್​​ದ ಚಿಖಾಲಿ ಸಮೀಪ ತಾನು ಸಂಗೀತಾಭ್ಯಾಸ ತರಗತಿಗೆ ತೆರಳುತ್ತಿದೆ. ಈ ಸಂದರ್ಭ ವ್ಯಾನ್​​ನಲ್ಲಿ ಬಂದ ಯುವಕರು ನನ್ನನ್ನು ಬಲವಂತವಾಗಿ ಎಳೆದೊಯ್ದು ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಳು. 

ತಕ್ಷಣ ಪ್ರಕರಣ ದಾಖಲಿಸಿಕೊಂಡ ‍ಪೊಲೀಸರು ಇರುವ ಕೆಲಸವನ್ನೆಲ್ಲಾ ಬದಿಗಿಟ್ಟು, ಸಂತ್ರಸ್ತೆಗೆ ಶೀಘ್ರ ನ್ಯಾಯ ಕೊಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ನಾಗ್ಪುರ್​​ ಪೊಲೀಸ್​ ಕಮಿಷನರ್​​ ಅಮಿತೇಶ್ ಕುಮಾರ್​ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ತನಿಖೆಯಲ್ಲಿ ಭಾಗಿಯಾದ್ದರು. ಯುವತಿ ಹೇಳಿರುವ ಸ್ಥಳದಲ್ಲಿ ಇರುವ 250ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿಯೂ ಅಪಹರಣದ ಕುರುಹು ದೊರಕಲಿಲ್ಲ. 

ಈ ನಡುವೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರದಿ ಕೂಡಾ ಶೀಘ್ರದಲ್ಲಿ ಬಂದಿದ್ದು, ಆದರೆ ವರದಿಯು ಅತ್ಯಾಚಾರ ನಡೆದೇ ಇಲ್ಲ ಎಂದು ಹೇಳಿತು. ಇದರಿಂದ ಅನುಮಾನಗೊಂಡ ಪೊಲೀಸರು ಯುವತಿಯನ್ನು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಹೆದರಿದ ಯುವತಿ ಸತ್ಯ ಬಾಯಿ ಬಿಟ್ಟಿದ್ದಾಳೆ. 

ಅದೇನೆಂದರೆ ಆಕೆ ಯುವಕನೋರ್ವನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಮನೆಯಲ್ಲಿ ಈ ಮದುವೆಗೆ ವಿರೋಧ ಬರುಬಹುದು ಎಂದು ಅನ್ನಿಸಿದೆ. ಅದಕ್ಕಾಗಿ ತನ್ನನ್ನು ಯಾರಾದರೂ ಅತ್ಯಾಚಾರ ಮಾಡಿದ್ದಾರೆ ಎಂದು ಸುದ್ದಿಯಾದರೆ ಯಾರೂ ತನ್ನನ್ನು ಮದುವೆಯಾಗಲು ಮುಂದೆ ಬರುವುದಿಲ್ಲ. ಆಗ ತಾನು ಪ್ರೀತಿಸಿದವನ ಜತೆ ಮದುವೆಯಾಗಬಹುದು ಎಂದು ಈ ತರಹ ಕತೆ ಕಟ್ಟಿದ್ದಾಳೆ. ಈಕೆಯ ಈ ಪ್ಲ್ಯಾನ್ ನಿಂದ ನಿಜವಾಗಿಯೂ ಪೊಲೀಸರು ಬೇಸ್ತು ಬಿದ್ದಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ