ಮದ್ಯಪಾನದ ಮತ್ತಿನಲ್ಲಿ ಆನ್ಲೈನ್ ಕ್ಲಾಸ್ ಗ್ರೂಪ್ ಗೆ ಪೋರ್ನ್‌ ವೀಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ!

ಚೆನ್ನೈ: ಮದ್ಯಪಾನ ಮಾಡಿರುವ ಮತ್ತಿನಲ್ಲಿ ಗಣಿತ ಶಿಕ್ಷಕನೋರ್ವನು ಪೋರ್ನ್‌ ವೀಡಿಯೋವೊಂದನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಕಳುಹಿಸಿದ್ದು, ಈ ವೀಡಿಯೋ ಆನ್‌ಲೈನ್‌ ಕ್ಲಾಸ್‌ಗಾಗಿ ವಿದ್ಯಾರ್ಥಿಗಳು ಇರುವ ಗ್ರೂಪ್‌ಗಳಿಗೂ ಹೋಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಈ ವೀಡಿಯೋವನ್ನು ನೋಡಿದ ವಿದ್ಯಾರ್ಥಿಗಳು ಹಾಗೂ ಪಾಲಕರು ದಂಗಾಗಿದ್ದಾರೆ.

ಅಂಬತ್ತೂರಿನ ಮತ್ತಿವನನ್ ಎಂಬಾತ ಅಶ್ಲೀಲ ವೀಡಿಯೋವನ್ನು ಹಂಚಿಕೊಂಡಿರುವ ಗಣಿತ ಶಿಕ್ಷಕ. 

ಈತ ಅಶ್ಲೀಲ ವೀಡಿಯೋ ಶೇರ್ ಮಾಡಿರುವ ಗ್ರೂಪ್‌ನಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು. ಬೆಳಗ್ಗೆ ಆನ್‌ಲೈನ್‌ ಕ್ಲಾಸ್‌ಗಾಗಿ ಮೊಬೈಲ್‌ ತೆರೆದಾಗ ವೀಡಿಯೋ ನೋಡಿ ವಿದ್ಯಾರ್ಥಿಗಳು ದಂಗಾಗಿ ಹೋಗಿದ್ದಾರೆ. ತಕ್ಷಣ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಶಿಕ್ಷಕ ಅಂಬತ್ತೂರಿನ ಮತ್ತಿವನನ್ ನನ್ನು ಆಡಳಿತ ಮಂಡಳಿಯವರು ಕರೆದು ತನಿಖೆ ನಡೆಸಿದ್ದಾರೆ. 

ಮದ್ಯ ಸೇವನೆ ಮಾಡಿರುವ ಅಮಲಿನಲ್ಲಿ ಈ ವೀಡಿಯೋ ಗ್ರೂಪ್‌ಗೂ ಶೇರ್‌ ಆಗಿದೆ ಎಂದು ಶಿಕ್ಷಕ ಹೇಳಿಕೆ ನೀಡಿದ್ದಾನೆ. ಸದ್ಯ ಪೊಲೀಸರು ಮತ್ತಿವನನ್‍ನನ್ನು ಪೊಕ್ಸೊ ಹಾಗೂ ಐಟಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.