-->

ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆಗೆ ಬೆಂಗಳೂರಿನ‌ ಅಮನಾ ಭಾಜನ!

ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆಗೆ ಬೆಂಗಳೂರಿನ‌ ಅಮನಾ ಭಾಜನ!

ಬೆಂಗಳೂರು: ಪ್ರತಿಷ್ಠಿತ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನ ‘ಮೋಸ್ಟ್ ಪ್ರೋಲಿಫಿಕ್ ಪೊಯೆಟ್’ ಎಂಬ ವಿಶ್ವದಾಖಲೆಗೆ ಬೆಂಗಳೂರಿನ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು  ಭಾಜನರಾಗಿದ್ದಾಳೆ.

ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅಮನಾ ಜೆ. ಕುಮಾರ್ ಈ ಪ್ರಶಸ್ತಿಗೆ ಭಾಜನರಾಗಿದ್ದಾಳೆ. ಅಮನಾ ಜೆ. ಕುಮಾರ್ 2020ರ ಎ.4ರಿಂದ 2021ರ ನ.29ರ ನಡುವೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಒಟ್ಟು 337 ಕವನಗಳನ್ನು ರಚಿಸಿದ್ದಳು. ಈ ಎಲ್ಲ ಕವನಗಳು ಒಟ್ಟಾರೆ 10,070 ಸಾಲುಗಳನ್ನು ಒಳಗೊಂಡಿತ್ತು. ಇದೀಗ ಈ ವಿಚಾರವು ನೂತನ ವಿಶ್ವ ದಾಖಲೆಯಾಗಿದೆ. 

ಪ್ರಕೃತಿ, ಕೋವಿಡ್ ಸೋಂಕು, ಕುಟುಂಬ, ಹಾಸ್ಯ, ದೇವರು, ಸಾಹಿತ್ಯ, ಭಾವನೆ, ಶಾಂತಿ, ಕೃತಜ್ಞತೆ, ಮಾನವೀಯತೆ, ರಾಷ್ಟ್ರ, ಸಮಾಜ, ಜೀವನ, ಪ್ರೀತಿ, ಮಹತ್ವಾಕಾಂಕ್ಷೆ, ಕನಸು, ಅನುಭವ ಹೀಗೆ ವಿಭಿನ್ನ ವಿಷಯಗಳ ಮೇಲೆ ಈ ಎಲ್ಲಾ ಕವನಗಳು ರಚಿಸಲ್ಪಟ್ಟಿವೆ. ಇತ್ತೀಚೆಗಷ್ಟೇ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ‘ಭಾರತದ ಅತ್ಯಂತ ಕಿರಿಯ ಕವಯಿತ್ರಿ’ ಹಾಗೂ ಚಿಕ್ಕ ವಯಸಿನಲ್ಲಿ ಕವನಗಳನ್ನು ಬರೆದಿರುವುದಕ್ಕಾಗಿ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ನ ‘ಗ್ರ್ಯಾಯಂಡ್ ಮಾಸ್ಟರ್’ ದಾಖಲೆಗಳಿಗೆ ಅಮನಾ ಭಾಜನರಾಗಿದ್ದಾರೆ. ಇದೀಗ ಅಮನಾ ಜೆ. ಕುಮಾರ್ ತಮ್ಮ ಎರಡನೇ ಕವನ ಸಂಕಲನ ಶೀಘ್ರದಲ್ಲೇ ಪ್ರಕಟವಾಗಲಿದೆ.

Ads on article

Advertise in articles 1

advertising articles 2

Advertise under the article