ಮಂಗಳೂರು; ಉಡುಪಿ ಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಇದ್ದ ಅನ್ಯಮತೀಯ ಜೋಡಿ ಮೇಲೆ ಅನೈತಿಕ ಪೊಲೀಸ್ ಗಿರಿ ಮೆರೆದ ಇಬ್ಬರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಉಡುಪಿ ಯಿಂದ ಮಂಗಳೂರು ಬಸ್ ನಲ್ಲಿ ಬರುತ್ತಿದ್ದ ಅನ್ಯಮತೀಯ ಜೋಡಿಯನ್ನು ಬಸ್ ನಲ್ಲಿ ತಡೆದು ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು.ಬಸ್ ನಿಂದ ಕೆಳಗಿಳಿಸಿಯು ಈ ಜೋಡಿಯ ಮಾನಹಾನಿ ಮಾಡಲಾಗಿತ್ತು. ಇದರ ವಿಡಿಯೋ ಚಿತ್ತೀಕರಿಸಿ ವೈರಲ್ ಕೂಡ ಮಾಡಲಾಗಿತ್ತು.
ಈ ಪ್ರಕರಣ ಉಡುಪಿ ಯಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿತ್ತು. ಬಳಿಕ ಪೊಲೀಸರು ಇದು ಮಂಗಳೂರು ಬಸ್ ಸ್ಟಾಂಡ್ ನಲ್ಲಿ ನಡೆದ ಪ್ರಕರಣ ಎಂದು ತಿಳಿದು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಯುವತಿ ಉಡುಪಿ ಜಿಲ್ಲೆಯವರಾಗಿದ್ದು ಯುವಕ ಶಿವಮೊಗ್ಗ ಜಿಲ್ಲೆಯವನಾಗಿದ್ದಾನೆ. ಇಬ್ಬರ ಹೆತ್ತವರನ್ನು ಕರೆಸಿ ಅವರಿಂದ ಘಟನೆಯ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.