-->

ಈ ಏಳು ಆ್ಯಪ್​ಗಳು ನಿಮ್ಮ‌ ಮೊಬೈಲ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಲು ಸೂಚಿಸಿದ ಮೊಬೈಲ್ ಭದ್ರತಾ ಸಂಸ್ಥೆ!

ಈ ಏಳು ಆ್ಯಪ್​ಗಳು ನಿಮ್ಮ‌ ಮೊಬೈಲ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಲು ಸೂಚಿಸಿದ ಮೊಬೈಲ್ ಭದ್ರತಾ ಸಂಸ್ಥೆ!

ಮುಂಬೈ: ಈ ಏಳು ಆ್ಯಪ್​ಗಳನ್ನು ತಮ್ಮ ಮೊಬೈಲ್ ಗಳಲ್ಲಿ ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡಿ ಎಂದು ಮೊಬೈಲ್ ಸೆಕ್ಯುರಿಟಿ ಸೊಲ್ಯುಷನ್ಸ್ ಸಂಸ್ಥೆಯಾದ ಪ್ರಡಿಯೊ ಸ್ಮಾರ್ಟ್​ಫೋನ್ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. 

ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಹೊಸ ಅಪ್ಲಿಕೇಶನ್‌ಗಳಲ್ಲಿ ಮತ್ತೆ ಜೋಕರ್ ಎಂಬ ವೈರಸ್ ಕಾಣಿಸಿಕೊಂಡಿದೆ. ಜೋಕರ್ ಮಾಲ್ವೇರ್ ಈಗಾಗಲೇ 15 ಜನಪ್ರಿಯ ಅಪ್ಲಿಕೇಶನ್‌ಗಳ ಒಳಗೆ ಹೊಕ್ಕಿದೆ. ಈ ಮಾಲ್ವೇರ್ ದಾಳಿಗಳಲ್ಲಿ ನಕಲಿ ಚಂದಾದಾರಿಕೆ ಹಾಗೂ ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಮೂಲಕ ಅಕ್ರಮ ಹಣವನ್ನು ಗಳಿಸುವ ಗುರಿ ಅತ್ಯಂತ ಸಾಮಾನ್ಯವಾದವು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಆನ್‌ಲೈನ್‌ಗೆ ಪರಿವರ್ತನೆಗೊಂಡಿರುವುದರಿಂದ ಸೈಬರ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಮುಂದೆ ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು. ಅಲ್ಲದೆ ಅನುಮಾನಾಸ್ಪದವಾಗಿ ಕಾಣುವ ಯಾವುದೇ ಲಿಂಕ್‌ಗಳು ಅಥವಾ ಅನುಚಿತ ಖರೀದಿಗಳಿಗೆ ಬಲಿಯಾಗಬಾರದು ಎಂದು ತಜ್ಞರು ತಿಳಿಸಿದ್ದಾರೆ.

Color Message, Safety AppLock, Convenient Scanner 2, Push Message-Texting&SMS, Emoji Wallpaper, Separate Doc Scanner, Fingertip GameBox ಈ ಏಳು‌ ಆ್ಯಪ್ ಗಳು.
ಕಳೆದ ಎರಡು ತಿಂಗಳುಗಳಲ್ಲಿ ಜೋಕರ್‌  ಹೆಸರಿನ ಅಪಾಯಕಾರಿ ಮಾಲ್ವೇರ್ ಎರಡನೇ ಬಾರಿ ಗೂಗಲ್‌ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್​ಗಳನ್ನು ನಿರಂತರವಾಗಿ ಗುರಿಯಾಗಿಸಿ ಒಳಹೊಕ್ಕುವ ಮಾಲ್ವೇರ್ ಗಳಲ್ಲಿ ಜೋಕರ್ ಕೂಡಾ ಒಂದು. ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಮಾಲ್ವೇರ್ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಿದ್ದಾರೆ. 

ಇತ್ತೀಚೆಗಷ್ಟೆ ಟ್ರೋಜನ್ ಜೋಕರ್ ಮಾಲ್ವೇರ್ ಅನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ಈ 14 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ‌ ತೆಗೆದುಹಾಕಿತ್ತು. ಅನೇಕ ಸ್ಕ್ವಿಡ್ ಆಟದ ಬಳಕೆದಾರರು ಮಾಲ್ವೇರ್ ನೊಂದಿಗೆ ಸೈಬರ್ ಅಪರಾಧಿಗಳಿಂದ ಇದೇ ರೀತಿಯ ದಾಳಿಯನ್ನು ಎದುರಿಸುತ್ತಿದ್ದಾರೆ. ಈ ವಿಷಯ ಬೆಳಕಿಗೆ ಬಂದ ನಂತರ ಪ್ಲೇ ಸ್ಟೋರ್ ಅನ್ನು ಹೊಂದಿರುವ ಗೂಗಲ್ ಆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಅವುಗಳನ್ನು ಅನ್‌ಇನ್​ಸ್ಟಾಲ್ ಮಾಡಿ ಎಂದು ಪ್ರಡಿಯೊ ಸ್ಮಾರ್ಟ್​ಫೋನ್ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. 

Ads on article

Advertise in articles 1

advertising articles 2

Advertise under the article