-->
ಪ್ರಿಯಕರನನ್ನು ಮದುವೆಯಾಗಲೆಂದು ವಧು ಮಾಡಿರುವ ಪ್ಲ್ಯಾನ್ ಗೆ ಎಲ್ಲರೂ ಶಾಕ್: ಅಕ್ಕನ ಬದಲಿಗೆ ತಂಗಿ ಕೊರಳಿಗೆ ತಾಳಿ

ಪ್ರಿಯಕರನನ್ನು ಮದುವೆಯಾಗಲೆಂದು ವಧು ಮಾಡಿರುವ ಪ್ಲ್ಯಾನ್ ಗೆ ಎಲ್ಲರೂ ಶಾಕ್: ಅಕ್ಕನ ಬದಲಿಗೆ ತಂಗಿ ಕೊರಳಿಗೆ ತಾಳಿ

ಫಿರೋಜಾಬಾದ್‌: 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯಂತೆ ಮದುವೆಯ ಹೆಸರಿನಲ್ಲಿ ನಡೆಯುವ ಮೋಸ, ವಂಚನೆಗಳಿಗಂತೂ ಲೆಕ್ಕವೇ ಇಲ್ಲ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳೂ ಕೂಡಾ ಹಿಂದೆ ಬಿದ್ದಿಲ್ಲ. ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಭಾವಿ ಪತಿ ಹಾಗೂ ಆತನ ಮನೆಯವರನ್ನು ವಂಚಿಸಿ ಮದುಮಗಳು ಪರಾರಿಯಾಗಿರುವ ಘಟನೆಯೊಂದು  ನಡೆದಿದೆ. 

ಸಂಭ್ರಮ, ಸಡಗರದಲ್ಲಿದ್ದ ಮದುವೆ ಮನೆಯಲ್ಲಿ ವಧು ಪರಾರಿಯಾಗಿದ್ದು ಭಾರಿ ಆಘಾತಕ್ಕೆ ಕಾರಣವಾಗಿತ್ತು. ಆದರೆ ಈ ಘಟನೆಯು ಸಣ್ಣ ಟ್ವಿಸ್ಟ್‌  ಪಡೆದುಕೊಂಡು ವಧುವಿನ ತಂಗಿಯೊಂದಿಗೇ ವರನಿಗೆ ಮದುವೆಯಾಗಿ ಪರಿಸ್ಥಿತಿ ತಿಳಿಯಾಗಿ ಹೋಯಿತು.  

ವಧು ಅಂದರೆ ಅಕ್ಕ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆದರೆ ಈ ವಿಚಾರವನ್ನು ಮನೆಯವರಿಂದ ಗುಟ್ಟಾಗಿ ಇಟ್ಟಿದ್ದಳು. ಕಾರಣ ಈಕೆಯ ಪ್ರಿಯಕರನಿಗೆ ಸರಿಯಾದ ಉದ್ಯೋಗ ಇರಲಿಲ್ಲ. ಆದರೂ ಆಕೆಗೆ ಆತನೇ ಬೇಕಿತ್ತು. ಆದರೆ ಇವರಿಬ್ಬರ ಮದುವೆಗೆ ಒಂದಷ್ಟು ಹಣದ ಅವಶ್ಯಕತೆ ಇತ್ತು. 

ಇದನ್ನು ಅರಿಯದ ಹೆತ್ತವರು ಆಕೆಗೆ ಬೇರೆ ವರನನ್ನು ಗೊತ್ತು ಮಾಡಿ ಜತೆ ಮದುವೆಗೆ ಸಿದ್ಧತೆ ನಡೆಸಿದ್ದರು. ಮದುವೆ ಖರ್ಚಿಗೆಂದು ಹಣ ಹಾಗೂ ಮದುಮಕ್ಕಳಿಗೆಂದು ಹಾಕಲೆಂದು ತಂದಿರುವ ಚಿನ್ನಾಭರಣವೆಲ್ಲವೂ ಮನೆಯನ್ನು ಸೇರಿತ್ತು. 

ಮದುವೆಯ ಹಿಂದಿನ ದಿನದ ಶಾಸ್ತ್ರ ನಡೆಯುತ್ತಿದ್ದಾಗ ಮದುಮಗಳು ವರನಿಗೆ ಹಾಗೂ ಅಲ್ಲಿದ್ದವರಿಗೆ ಚಹಾ ಮಾಡಿಕೊಟ್ಟಿದ್ದಾಳೆ. ಎಲ್ಲರೂ ಆಕೆ ನೀಡಿರುವ ಚಹವನ್ನು ಸಂತೋಷದಿಂದ ಕುಡಿದಿದ್ದಾರೆ. ಆದರೆ ಈ ವಧು ಅದರಲ್ಲಿ ನಿದ್ದೆ ಮಾತ್ರೆ ಹಾಕಿದ್ದಳು. ಯಾರಿಗೂ ಇದರ ಅರಿವಿಲ್ಲದೆ ಚಹಾ ಸೇವನೆ ಮಾಡಿ ನಿದ್ದೆಗೆ ಜಾರಿದ್ದಾರೆ.

ಮೊದಲೇ ಮಾಡಿರುವ ಪ್ಲ್ಯಾನ್‌ನಂತೆ ವಧು ಅಲ್ಲಿರುವ ಎಲ್ಲಾ ಚಿನ್ನಾಭರಣ, ಹಣ ದೋಚಿಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಎಲ್ಲರಿಗೂ ಎಚ್ಚರವಾದ ಸಂದರ್ಭ ಮೋಸ ಹೋಗಿರುವುದು ಅರಿವಾಗಿದೆ. ಇದು ವಧುವಿನ ಪೋಷಕರಿಗೆ ಭಾರೀ ಅವಮಾನ ಹಾಗೂ ಮುಜುಗರಕ್ಕೀಡು ಮಾಡಿದೆ. ಆದರೆ ಮದುವೆ ನಿಲ್ಲಬಾರದೆನ್ನುವ ಕಾರಣಕ್ಕೆ ವರನ ಮನೆಯವರ ಬಳಿ ಕ್ಷಮೆ ಯಾಚನೆ ಮಾಡಿದ್ದಲ್ಲದೆ ತಮ್ಮ ಕಿರಿಯ ಮಗಳನ್ನು ಮದುವೆಯಾಗುವಂತೆ ವರ ಹಾಗೂ ಆತನ ಮನೆಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಅವರೂ ಒಪ್ಪಿದ ಹಿನ್ನೆಲೆಯಲ್ಲಿ ವರ ಅಕ್ಕನ ಬದಲೆಗೆ ತಂಗಿಗೆ ತಾಳಿ ಕಟ್ಟಿದ್ದು, ಮದುವೆ ಸುಸೂತ್ರವಾಗಿ ನೆರವೇರಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100