-->

Mangaluru-Vijayapura Rail Begins- ಮಂಗಳೂರು - ವಿಜಯಪುರ ನಡುವೆ ಹೊಸ ರೈಲು ಸಂಚಾರ ಆರಂಭ

Mangaluru-Vijayapura Rail Begins- ಮಂಗಳೂರು - ವಿಜಯಪುರ ನಡುವೆ ಹೊಸ ರೈಲು ಸಂಚಾರ ಆರಂಭ

ಮಂಗಳೂರು - ವಿಜಯಪುರ ನಡುವೆ ಹೊಸ ರೈಲು ಸಂಚಾರ ಆರಂ


ಕೇಂದ್ರ ರೈಲ್ವೆ ಸಚಿವರಾಗಿದ್ದ ದಿವ೦ಗತ ಸುರೇಶ ಅಂಗಡಿ ಅವರ ಕನಸಿನ ಹೊಸ ರೈಲು 1.12.2021 ರಿಂದ ವಿಜಯಪುರ-ಮಂಗಳೂರು ಮಧ್ಯೆ ಪ್ರಾರಂಭಗೊಂಡಿದೆ.





ರೈಲು ಪ್ರತಿದಿನ ಸಂಜೆ 6.15 ಕ್ಕೆ ವಿಜಯಪುರದಿಂದ ಹೊರಟು, ಆಲಮಟ್ಟಿ, ಬಾಗಲಕೊಟ, ಬದಾಮಿ ಮಾರ್ಗವಾಗಿ ಗದಗ, ಹುಬ್ಬಳ್ಳಿ, ರಾಣಿಬೆನ್ನೂರ, ಹರಿಹರ, ದಾವಣಗೆರೆ, ಅರಸೀಕೆರೆ, ಹಾಸನ, ಸುಬ್ರಹ್ಮಣ್ಯ, ಪುತ್ತೂರು ಮುಂತಾದ ಪ್ರಮುಖ ನಗರಗಳ ಮೂಲಕ ಹಾಯ್ದು ಮರುದಿನ ಬೆಳಿಗ್ಗೆ ಮಂಗಳೂರು ತಲುಪಲಿದೆ.


ಸದ್ಯ ಈ ರೈಲು ಪ್ರತಿದಿನ ಸಂಚರಿಸುತ್ತಿದೆ. ಆದರೆ, ಪ್ರಚಾರದ ಕೊರತೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಆಸನಗಳು ಖಾಲಿ ಇರುತ್ತವೆ. 



ಸದರಿ ರೈಲು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ಪಶ್ಚಿಮ ಘಟ್ಟದ ಪ್ರಮುಖ ಪ್ರವಾಸಿ ತಾಣ ಗಳಾದ ಕುಕ್ಕೆ ಸುಬ್ರಮಣ್ಯ, ಧರ್ಮ ಸ್ಥಳ ಮುಂತಾದ ಸ್ಥಳಗಳ ವೀಕ್ಷಣೆಗೆ ತುಂಬ ಅನುಕೂಲವಾಗಿದೆ.



ಆದರೆ ಈ ರೈಲ್ವೆ ಪ್ರಾರಂಭಗೊಂಡ ವಿಷಯದ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿಲ್ಲ.


ಹೆಚ್ಚಿನ ಪ್ರಯಾಣಿಕರು ಈ ರೈಲ್ವೆಯ ಸೌಲಭ್ಯ ಪಡೆಯದೇ ಹೋದರೆ ಆದಾಯ ಕಡಿಮೆಯಾಗಿ ಇಲಾಖೆ ಅನಿವಾರ್ಯವಾಗಿ ಈ ಸೇವೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. 


ಅದಕ್ಕೆ ಅಸ್ಪದ ಕೊಡದೇ ಸದರಿ ರೈಲ್ವೆಯ ಅನುಕೂಲವನ್ನು ಉತ್ತರ ಕರ್ನಾಟಕ ಸಹಿತ ಕರಾವಳಿ, ಮಲೆನಾಡು ಭಾಗದ ಜನರು ಪಡೆಯಲು ತಾವುಗಳು ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಕಳುಹಿಸಲು ಕೋರಲಾಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article