ಕೆಎಫ್ ಸಿ ಚಿಕನ್ ಖರೀದಿಸಿ ಪೀಸ್ ಬಾಯಿಗಿಟ್ಟ ತಕ್ಷಣ ಶಾಕ್ ಗೊಳಗಾದ ಗ್ರಾಹಕಿ: ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆ

ಲಂಡನ್​: ಕೆಎಫ್​ಸಿ ಚಿಕನ್​ ಅಂದರೆ ಎಲ್ಲರೂ ಬಾಯಿಚಪ್ಪರಿಸೋದೆ ಜಾಸ್ತಿ. ಏಕೆಂದರೆ, ಇಲ್ಲಿನ ರುಚಿಕರವಾದ ಗರಿಗರಿಯಾದ ಚಿಕನ್ ಸ್ವಾದ ಅಂತಹದ್ದು. ಹಾಗಂತ ಸೀದಾ ಈ ಚಿಕನ್ ಅನ್ನು ಬಾಯಿಗಿಳಿಸಿಕೊಂಡರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಂತಿದೆ. 

ಬಹುತೇಕರು ಚಿಕನ್​ ಖರೀದಿಸುವಾಗ ಅದರ ತಲೆಯನ್ನು ಕೊಳ್ಳುವುದಿಲ್ಲ. ಏಕೆಂದರೆ, ಬಹುತೇಕರಿಗೆ ಕೋಳಿಯ ತಲೆಮಾಂಸ ಇಷ್ಟವಾಗುವುದಿಲ್ಲ. ಅಲ್ಲದೆ ನಾನ್​ವೆಜ್​ ಹೋಟೆಲ್​ಗಳಲ್ಲೆಲಾದರೂ ಮಾಂಸದ ಜತೆಯಲ್ಲಿ ಕೋಳಿ ತಲೆಯಿದ್ದರೆ ಜಗಳಕ್ಕೆ ಬರುತ್ತಾರೆ. ಆದ್ದರಿಂದ ಎಲ್ಲಾ ಹೋಟೆಲ್​ಗಳಲ್ಲಿ ಹಾಗೂ ಚಿಕನ್​ ಸ್ಟಾಲ್​ಗಳಲ್ಲಿ ಕೋಳಿ ತಲೆಯನ್ನು ಪ್ರತ್ಯೇಕವಾಗಿ ಇಡುತ್ತಾರೆ. ಈ ಕೋಳಿ ತಲೆ ಮಾಂಸದ ಆಹಾರವನ್ನು ತಿನ್ನುವರು ಬೆರಳಣಿಕೆ ಮಂದಿಯಷ್ಟೇ. ಆದರೆ, ಕುರಿ ತಲೆ ಮಾಂಸಕ್ಕೆ ಬಹುಬೇಡಿಕೆ ಇದೆ. 

ಈಗ ಅಸಲಿ ವಿಚಾರಕ್ಕೆ ಬರೋದಾದರೆ, ಯುಕೆಯಲ್ಲಿ ಕೆಎಫ್​ಸಿಯಲ್ಲಿ ಗ್ರಾಹಕರೊಬ್ಬರು ಚಿಕನ್​ ಖರೀದಿಸಿದ್ದಾರೆ. ವೈಟರ್ ಆಹಾರವನ್ನು ಇಟ್ಟ ತಕ್ಷಣ ಚಿಕನ್ ಪೀಸನ್ನು ಬಾಯಿಗಿಟ್ಟು ಚಪ್ಪರಿಸಿ ತಿನ್ನಲು ಆರಂಭಿಸಿದ್ದಾರೆ. ಆಗ ಅವರಿಗೆ ಆಘಾತವೊಂದು ಕಾದಿತ್ತು. ಏಕೆಂದರೆ, ಗರಿಗರಿಯಾದ ಮಾಂಸದ ಜತೆಯಲ್ಲಿ ಕೋಳಿ ತಲೆ ಮಾಂಸವೂ ಇತ್ತು. ಅದನ್ನು ನೋಡಿ ಆ ಗ್ರಾಹಕರಿಗೆ ಸಿಟ್ಟು ನೆತ್ತಿಗೇರಿದೆ. 

ಆತ ಅದರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಗ್ರಾಹಕರ ಹೆಸರು ಗೇಬ್ರಿಯಲ್​ ತನ್ಮ ಅನುಭವವನ್ನು ವಿವರಿಸಿದ್ದಾರೆ. ಟೇಕವೇಟ್ರಾಮ ಹೆಸರಿನ ಟ್ವಿಟರ್​ ಖಾತೆಯಲ್ಲಿ ಆಕೆ ಪೋಸ್ಟ್​ ಮಾಡಿದ್ದಾರೆ.

ಈ ಮೂಲಕ ಮಹಿಳೆ ತಮಗಾದ ಕಹಿ ಅನುಭವವನ್ನು ವಿವರಿಸಿದ್ದಾರೆ. ಇಡೀ ಕೋಳಿ ತಲೆ ಸ್ಪಷ್ಟವಾಗಿ ಕಾಣುವಂತಹ ಕೆಎಫ್​ಸಿ ಚಿಕನ್​ ನೋಡಿ ಗಾಬರಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ‌. ಈ ಬಗ್ಗೆ ಕೆಎಫ್​ಸಿಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. 

ಆಹಾರ ತಯಾರಿಸುವಾಗ ಸರಿಯಾಗಿ ಪರಿಶೀಲನೆ ಮಾಡಬೇಕು. ಇಂತಹ ಘಟನೆಗಳಿಂದ ಕಂಪೆನಿಗೆ ಕೆಟ್ಟ ಹೆಸರು ಬರೋದು ಖಂಡಿತಾ ಎಂದು ನೆಟ್ಟಿಗರೊಬ್ಬರು ಬೇಸರದ ಜತೆ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತ ಫೋಟೋ ವೈರಲ್​ ಆಗುತ್ತಿದ್ದಂತೆ ಎಚ್ಚತ್ತಿರುವ ಕೆಎಫ್​ಸಿ ಇದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಿದ್ದೇವೆ. ಅಪರೂಪದ ಸಂದರ್ಭಗಳಲ್ಲಿ ತಪ್ಪಾಗಿ ಹೋಗುತ್ತವೆ ಹಾಗೂ ಇದು ನಂಬಲಾಗದಷ್ಟು ಅಪರೂಪವಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಘಟನೆ ನಡೆಯದಂತೆ ತಡೆಯಲು ಸರಿಯಾದ ತಪಾಸಣೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಫ್‌ಸಿ ಭರವಸೆ ನೀಡಿದೆ. 

ಇದೇ ವೇಳೆ ಮಹಿಳೆ ಗೇಬ್ರಿಯಲ್ ಅವರನ್ನು ಉಚಿತ ಕೆಎಫ್‌ಸಿ ಊಟಕ್ಕೆ ಆಹ್ವಾನಿಸಿದೆ ಹಾಗೂ ಆಕೆಯ ಭಯವನ್ನು ನಿವಾರಿಸಲು ಅಡಿಗೆ ಪ್ರಕ್ರಿಯೆಗಳನ್ನು ಸಹ ತೋರಿಸಲಾಗಿದೆ. ಗ್ಯಾಬ್ರಿಯೆಲ್ ಶೀಘ್ರದಲ್ಲೇ ನಮಗೆ 5-ಸ್ಟಾರ್ ವಿಮರ್ಶೆಗಳನ್ನು ಬಿಟ್ಟು ಹಿಂತಿರುಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಕೆಎಫ್​ಸಿ ಹೇಳಿದೆ.