Job in Prasar Bharathi- ಪತ್ರಕರ್ತರಿಗೆ ಬಂಪರ್ ಉದ್ಯೋಗ: ಪ್ರಸಾರ ಭಾರತಿಯಲ್ಲಿ ಉನ್ನತ ಉದ್ಯೋಗ

ಪತ್ರಕರ್ತರಿಗೆ ಬಂಪರ್ ಉದ್ಯೋಗ: ಪ್ರಸಾರ ಭಾರತಿಯಲ್ಲಿ ಉನ್ನತ ಉದ್ಯೋಗ





ಸರ್ಕಾರಿ ಮಾಧ್ಯಮದಲ್ಲಿ ಸೇವೆ ಸಲ್ಲಿಸುವ ಸದವಕಾಶ ಪತ್ರಕರ್ತರಿಗೆ ಲಭ್ಯವಾಗಿದೆ. ಪ್ರಸಾರ ಭಾರತಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಸಮಾಲೋಚಕ, ಹಿರಿಯ ಸಲಹಾ ಸಂಪಾದಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.




ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪಿಜಿ ಪದವಿ ಯಾ ಪಿಜಿ ಡಿಪ್ಲೊಮಾ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ.




ಹುದ್ದೆಯ ಹೆಸರು

1- ಸಮಾಲೋಚಕ

2- ಹಿರಿಯ ಸಲಹಾ ಸಂಪಾದಕ



ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ಬೋರ್ಡ್/ವಿವಿ ಯಿಂದ ಪತ್ರಿಕೋದ್ಯಮದಲ್ಲಿ ಪಿಜಿ ಪದವಿ/ಪಿಜಿ ಡಿಪ್ಲೋಮಾ ಪದವಿ ಪಡೆದಿರಬೇಕು.

ಖಾಸಗಿ ಸುದ್ದಿ ಸಂಸ್ಥೆಗಳಲ್ಲಿ ದುಡಿದ ಅನುಭವವನ್ನು ಪರಿಗಣಿಸಲಾಗುತ್ತದೆ.



ವಯೋಮಿತಿ: ಅಧಿಸೂಚನೆಯ ಪ್ರಕಾರ ಸೂಕ್ತ ವಯೋಮಿತಿ ಹೊಂದಿರಬೇಕು. ಸಡಿಲಿಕೆಗೆ ನಿಯಮಾನುಸಾರ ಅವಕಾಶ ಇರುತ್ತದೆ.



ಆಯ್ಕೆ ಹೇಗೆ?: ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ತಯಾರಿಸಿ, ಬಳಿಕ ಲಿಖಿತ ಪರೀಕ್ಷೆ ನಡೆಸಿ ಆಯ್ಕೆಯಾದವರನ್ನು ಅಂತಿಮವಾಗಿ ನೇರ ಸಂದರ್ಶನ ನಡೆಸಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.



ವೇತನ: ಪ್ರಸಾರ ಭಾರತಿ ನೇಮಕಾತಿಯ ಅಧಿಸೂಚನೆ ಮತ್ತು ನಿಯಮಾನುಸಾರ 1.25 ಲಕ್ಷದ ವರೆಗೆ ವೇತನವನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವುದು.


ಅರ್ಜಿ ಸಲ್ಲಿಸಲು ಕೊನೆ ದಿನ: 17/12/2021



ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://prasarbharati.gov.in/ನಲ್ಲಿ ಮಾಹಿತಿ ಪಡೆಯಬಹುದಾಗಿದೆ.


Click herebelow:

https://prasarbharati.gov.in/wp-content/uploads/2021/12/Amendment.pdf