-->
ವಂಚಕನಿಂದ ಕಾಸ್ಟ್ಲಿ ಉಡುಗೊರೆ ಪಡೆದು ಸಂಕಷ್ಟ ಎದುರಿಸುತ್ತಿರುವ ಜಾಕ್ವೆಲಿನ್: ಸಲ್ಲು ಬಾಯ್ ‘ದ-ಬಾಂಗ್​: ದ ಟೂರ್, ರೀಲೋಡೆಡ್​​’ ನಿಂದ ನಟಿ ಔಟ್

ವಂಚಕನಿಂದ ಕಾಸ್ಟ್ಲಿ ಉಡುಗೊರೆ ಪಡೆದು ಸಂಕಷ್ಟ ಎದುರಿಸುತ್ತಿರುವ ಜಾಕ್ವೆಲಿನ್: ಸಲ್ಲು ಬಾಯ್ ‘ದ-ಬಾಂಗ್​: ದ ಟೂರ್, ರೀಲೋಡೆಡ್​​’ ನಿಂದ ನಟಿ ಔಟ್

ಮುಂಬೈ: 200 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್​ ಚಂದ್ರಶೇಖರ್​ನಿಂದ ಕೋಟ್ಯಂತರ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿರುವ ಆರೋಪದ ಮೇರೆಗೆ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​​ರನ್ನು ಇಡಿ ಇಂದು ಕೂಡ ವಿಚಾರಣೆಗೆ ಗುರಿಪಡಿಸಿದೆ.

200 ಕೋಟಿ ರೂ. ಮೌಲ್ಯದ ಮನಿ ಲಾಂಡರಿಂಗ್​ ಪ್ರಕರಣವೊಂದರಲ್ಲಿ ವಾಣಿಜ್ಯೋದ್ಯಮಿಯೊಬ್ಬರ ಪತ್ನಿಯಿಂದ ಸುಲಿಗೆ ಮಾಡಿರುವ ನಗದನ್ನು ಕಾನ್​ಮ್ಯಾನ್​ ಸುಕೇಶ್,​ ಜಾಕ್ವೆಲಿನ್​ಗೆ ಹಸ್ತಾಂತರಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆ ನಡೆದಿದೆ. ನಿನ್ನೆ ಕೂಡ 7 ಗಂಟೆಗಳಿಗೂ ಅಧಿಕ ಕಾಲ ಜಾಕ್ವೆಲಿನ್​ರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಂಚಕನಿಂದ ಹಣ ಪಡೆದಿರುವ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಜಾಕ್ವೆಲಿನ್​ ವಿರುದ್ಧ ಇಡಿ ಜಾರಿಗೊಳಿಸಿರುವ ಲುಕ್​ ಔಟ್​ ​ನೋಟಿಸ್ ಹಿನ್ನೆಲೆಯಲ್ಲಿ ರವಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜಾಕ್ವೆಲಿನ್​​ರನ್ನು ತಡೆಯಲಾಗಿತ್ತು. ಅಲ್ಲದೆ ಅವರಿಗೆ ದೇಶ ಬಿಟ್ಟು ಹೋಗದಂತೆ ಸೂಚಿಸಿ ವಾಪಸ್​ ಕಳಿಸಲಾಗಿತ್ತು. 

ಜಾಕ್ವೆಲಿನ್​ರಿಗೆ ವಿದೇಶಕ್ಕೆ ತೆರಳದಂತೆ ವಿಧಿಸಲಾಗಿರುವ ಇಡಿ ನಿರ್ಬಂಧದಿಂದ ಅವರ ಸಿನಿಮಾಗಳ ಮೇಲೆ ಭಾರೀ ಪರಿಣಾಮವಾಗುತ್ತಿದೆ. ಈಗಾಗಲೇ ಡಿಸೆಂಬರ್​ 10ರಂದು ನಡೆಯಲಿರುವ ಸಲ್ಮಾನ್​ ಖಾನ್​ರ ‘ದ-ಬಾಂಗ್​: ದ ಟೂರ್, ರೀಲೋಡೆಡ್​​’ ಸಿನಿಮಾದಿಂದ ಅವರನ್ನು ಕೈಬಿಡಲಾಗಿದೆ. ಈ ವೈಭವೋಪೇತ ಈವೆಂಟ್​ನಲ್ಲಿ ಜಾಕ್ವೆಲಿನ್​ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಲಾಗಿತ್ತು. ಅವರ ಭಾವಚಿತ್ರವಿರುವ ಪೋಸ್ಟರ್  ಈಗಲೂ ಪ್ರಚಾರದಲ್ಲಿ ಬಳಕೆಯಾಗುತ್ತಿದೆ. ಆದರೆ, ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಡೆಯಲಿರುವ ಶೋನಲ್ಲಿ ಭಾಗವಹಿಸಲು ಜಾಕ್ವೆಲಿನ್​ ಪ್ರಯಾಣಿಸುವುದು ಇದೀಗ ಸಾಧ್ಯವಾಗದ ಮಾತಾಗಿದೆ.


Ads on article

Advertise in articles 1

advertising articles 2

Advertise under the article