-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಆಂಧ್ರಪ್ರದೇಶದಲ್ಲಿ ತೆಲಂಗಾಣ ಥಿಯೇಟರ್ ಪಾರ್ಕಿಂಗ್ ದರಕ್ಕಿಂತಲೂ ಕಡಿಮೆ ಸಿನಿಮಾ ಟಿಕೆಟ್ ದರ: ಸರಕಾರದ ವಿರುದ್ಧ ಕೋರ್ಟ್ ಮೆಟ್ಟಲು ಹತ್ತಿದ ತೆಲುಗು ಚಿತ್ರೋದ್ಯಮ

ಆಂಧ್ರಪ್ರದೇಶದಲ್ಲಿ ತೆಲಂಗಾಣ ಥಿಯೇಟರ್ ಪಾರ್ಕಿಂಗ್ ದರಕ್ಕಿಂತಲೂ ಕಡಿಮೆ ಸಿನಿಮಾ ಟಿಕೆಟ್ ದರ: ಸರಕಾರದ ವಿರುದ್ಧ ಕೋರ್ಟ್ ಮೆಟ್ಟಲು ಹತ್ತಿದ ತೆಲುಗು ಚಿತ್ರೋದ್ಯಮ

ವಿಜಯವಾಡ: ಸಿನಿಮಾ ಟಿಕೆಟ್​ ದರ ನಿಗದಿ ವಿಚಾರವಾಗಿ ಆಂಧ್ರಪ್ರದೇಶ ಸರಕಾರ ಹಾಗೂ ತೆಲುಗು ಚಿತ್ರೋದ್ಯಮದ ನಡುವಿನ ತೆರೆಮರೆಯ ಹೋರಾಟ ಮತ್ತೂ ಮುಂದುವರಿದಿದೆ. ಈ ಮೂಲಕ ಆಂಧ್ರ ಸರಕಾರ ತೆಲುಗು ಚಿತ್ರೋದ್ಯಮವನ್ನು ದಮನ ಮಾಡುವ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ಆರೋಪಕ್ಕೆ ಪುಷ್ಟಿ ನೀಡುವಂತೆ​ ಫೋಟೋವೊಂದು ವೈರಲ್ ಆಗಿದೆ. 

ವೈರಲ್​ ಆಗಿರುವ ಆ ಫೋಟೋದಲ್ಲಿ ತೆಲಂಗಾಣದ ಸಿನಿಮಾ ಟಿಕೇಟ್ ದರ,​ ಪಾರ್ಕಿಂಗ್​ ದರ ಹಾಗೂ ಆಂಧ್ರಪ್ರದೇಶದ ಸಿನಿಮಾ ಟಿಕೆಟ್ ದರವನ್ನು ಹೋಲಿಕೆ ಮಾಡಲಾಗಿದೆ. ಆಂಧ್ರಪ್ರದೇಶ ರಾಜ್ಯದ ಸಿನಿಮಾ ಟಿಕೆಟ್​ ದರಕ್ಕಿಂತ ತೆಲಂಗಾಣದ ಸಿನಿಮಾ ಮಂದಿರದ ಪಾರ್ಕಿಂಗ್​ ದರವೇ ಅಧಿಕವಿದೆ.

ತೆಲಂಗಾಣದ ಚಿತ್ರಮಂದಿರಗಳಲ್ಲಿ ವಾಹನ ಪಾರ್ಕಿಂಗ್​ ದರ 30 ರೂ. ಇದ್ದರೆ, ಆಂಧ್ರದಲ್ಲಿ ಟಿಕೆಟ್​ ಬೆಲೆ ಬಾಲ್ಕನಿ 20, ಫಸ್ಟ್​ ಕ್ಲಾಸ್​ 15 ಹಾಗೂ ಸೆಕೆಂಡ್​ ಕ್ಲಾಸ್​ 10 ರೂ. ಇದೆ. ಆಂಧ್ರಪ್ರದೇಶ ಸರಕಾರವು ಸಿನಿಮಾ ಟಿಕೆಟ್​ ಬೆಲೆ ಇಳಿಸಿರುವ ಪರಿಣಾಮ ಮೂಲ ಖರ್ಚು ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಸರಕಾರದ ಈ ನೀತಿಯನ್ನು ಖಂಡಿಸಿ ಕಡಿಮೆ ಟಿಕೆಟ್​ ದರ ನಿಗದಿ ಮಾಡಿರುವ ಆಂಧ್ರದದಲ್ಲಿ ಅನೇಕ ಸಿನಿಮಾ ಮಂದಿರಗಳನ್ನು ಬಂದ್​ ಮಾಡಲಾಗಿದೆ. ಟಿಕೆಟ್​ ದರ ಮಾತ್ರವಲ್ಲದೆ, ಸಿನಿಮಾ ಹಾಲ್​ ಸುರಕ್ಷತಾ ಕ್ರಮಗಳ ಬಗ್ಗೆಯೂ ಸರ್ಕಾರ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದೆ. ಜೊತೆಗೆ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದ 15 ಸಿನಿಮಾ ಮಂದಿರಗಳನ್ನು ಸರ್ಕಾರ ಸೀಜ್​ ಮಾಡಿದೆ. 

ಆಂಧ್ರಪ್ರದೇಶ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ತೆಲುಗು ಚಿತ್ರೋದ್ಯಮ ಕೋರ್ಟ್​ ಮೆಟ್ಟಿಲೇರಿದೆ. ಅಲ್ಲದೆ, ನಾನಿ ಸೇರಿದಂತೆ ಅನೇಕ ನಟರು ಸರ್ಕಾರದ ಕ್ರಮವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಸದ್ಯ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಆರ್​ಆರ್​ಆರ್​ ಮತ್ತು ರಾಧೆ ಶ್ಯಾಮ್​ ಸಿನಿಮಾ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

Ads on article

Advertise in articles 1

advertising articles 2

Advertise under the article

ಸುರ