-->
ಡ್ರಗ್ಸ್ ಪೆಡ್ಲರ್ ನೊಂದಿಗೆ ಸಂಪರ್ಕದಲ್ಲಿದ್ದ ಪ್ರೆಸ್ಟೀಜ್ ಗ್ರೂಪ್ ಮಾಲಕನ ಸಹೋದರಿ: ತನಿಖೆಗೆ ಹಾಜರಾಗುವಂತೆ ಮೂರನೇ ಬಾರಿ ನೋಟಿಸ್

ಡ್ರಗ್ಸ್ ಪೆಡ್ಲರ್ ನೊಂದಿಗೆ ಸಂಪರ್ಕದಲ್ಲಿದ್ದ ಪ್ರೆಸ್ಟೀಜ್ ಗ್ರೂಪ್ ಮಾಲಕನ ಸಹೋದರಿ: ತನಿಖೆಗೆ ಹಾಜರಾಗುವಂತೆ ಮೂರನೇ ಬಾರಿ ನೋಟಿಸ್

ಬೆಂಗಳೂರು: ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಥಾಮಸ್ ಕಾಲು ಜೊತೆ ಸಂಪರ್ಕದಲ್ಲಿರುವ ಆರೋಪದಲ್ಲಿ ಅಂಜುಂ ರಜಾಕ್ ಜಂಗ್ ಎಂಬಾಕೆಗೆ ಗೋವಿಂದಪುರ ಠಾಣಾ ಪೊಲೀಸರು 3ನೇ ಬಾರಿ ನೋಟಿಸ್​ ನೀಡಲು ಸಿದ್ಧತೆ ನಡೆಸಿದ್ದಾರೆ.  

ಈ ಹಿಂದೆ ಆಕೆಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಅಂಜುಂ ರಜಾಕ್​ನಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವ ಹಿನ್ನೆಲೆಯಲ್ಲಿ ಇದೀಗ ಮೂರನೇ ಬಾರಿ ನೋಟಿಸ್​ ನೀಡಲು ನಿರ್ಧರಿಸಿದ್ದಾರೆ. ನೈಜೀರಿಯ ಡ್ರಗ್ಸ್ ಪೆಡ್ಲರ್ ಥಾಮಸ್ ಕಾಲು ಜತೆ ಅಂಜುಂ ರಜಾಕ್​ ಸಂಪರ್ಕದಲ್ಲಿರುವುದು ತಿಳಿದುಬಂದಿದೆ‌. ಅದೇ ರೀತಿ ಆತನಿಂದ ಸಾಕಷ್ಟು ಬಾರಿ ಡ್ರಗ್ಸ್ ಪಡೆದುಕೊಂಡಿರುವ ಬಗ್ಗೆಯೂ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. 

ಆರೋಪಿತೆಯಾಗಿರುವ ಅಂಜುಂ ರಜಾಕ್​, ಪ್ರೆಸ್ಟೀಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ. ಈಕೆ ಪ್ರೆಸ್ಟೀಜ್ ಗ್ರೂಪ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾಳೆ. ಈಕೆಗೆ ಸೆಪ್ಟೆಂಬರ್ 25 ರಂದು ವಿಚಾರಣೆಗೆ ಹಾಜರಾಗಲು ಗೋವಿಂದಪುರ ಠಾಣಾ ಪೊಲೀಸರು ನೊಟೀಸ್ ಜಾರಿ ಮಾಡಿದ್ದರು. ಆದರೆ, ನೋಟಿಸ್ ಸ್ವೀಕರಿಸಿದ್ದರೂ, ಆಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಆ ಬಳಿಕ ಅಕ್ಟೋಬರ್​ನಲ್ಲಿ ಮತ್ತೆ ಎರಡನೇ ಬಾರಿ ನೋಟಿಸ್ ನೀಡಿದ್ದರು. ಅದಕ್ಕೂ ಆಕೆಯ ಯಾವುದೇ ಪ್ರತಿಕ್ರಿಯೆ ಇಲ್ಲ. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲು ಸಿದ್ಧತೆ ನಡೆಸಿದ್ದಾರೆ. 

ಸೆಪ್ಟೆಂಬರ್​ನಲ್ಲಿ ಸಿಕ್ಕಿಬಿದ್ದಿರುವ ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್​ ಥಾಮಸ್ ಕಾಲುವಿನಿಂದ ಲಕ್ಷಾಂತರ ಮೌಲ್ಯದ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿತ್ತು. ಈ ಸಂದರ್ಭ ಆತನ ಮೊಬೈಲ್ ಫೋನ್​​ ಅನ್ನು ವಶಪಡಿಸಿಕೊಂಡು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಲಾಗಿತ್ತು.  ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಮಾಡಿ ಅಂಜುಂ ರಜಾಕ್​ ಡ್ರಗ್ಸ್ ತರಿಸಿಕೊಂಡಿರೊ‌ ಶಂಕೆ ಇದೆ. 

ಫ್ರೇಜರ್ ಟೌನ್​ನ ನಂದಿದುರ್ಗ ರಸ್ತೆಯಲ್ಲಿರುವ ಅಂಜುಂ ಮನೆಗೆ ಹಲವು ಬಾರಿ ಡ್ರಗ್ಸ್ ನೀಡಿರುವುದಾಗಿ ಪೆಡ್ಲರ್​ ಥಾಮಸ್ ಕಾಲು ಹೇಳಿಕೆ ನೀಡಿದ್ದಾನೆ. ಇದೇ ಕಾರಣಕ್ಕೆ ಮಾಹಿತಿ‌ ಪಡೆಯಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100