-->
ಮದುವೆಗೆ ಗ್ರೀನ್ ಸಿಗ್ನಲ್ ದೊರಕಿದರೂ ಈ ಪ್ರೇಮಿಗಳ ಬಾಳಲ್ಲಿ ವಿಧಿ ಬೇರೆಯೇ ಆಟ ಹೂಡಿತ್ತು: ಒಂದೇ ತಿಂಗಳ ಅಂತರದಲ್ಲಿ ದುರಂತ ಅಂತ್ಯ ಕಂಡ ಜೋಡಿ

ಮದುವೆಗೆ ಗ್ರೀನ್ ಸಿಗ್ನಲ್ ದೊರಕಿದರೂ ಈ ಪ್ರೇಮಿಗಳ ಬಾಳಲ್ಲಿ ವಿಧಿ ಬೇರೆಯೇ ಆಟ ಹೂಡಿತ್ತು: ಒಂದೇ ತಿಂಗಳ ಅಂತರದಲ್ಲಿ ದುರಂತ ಅಂತ್ಯ ಕಂಡ ಜೋಡಿ

ಕಲಬುರಗಿ: ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ಕುಟುಂಬದ ಕಡೆಯಿಂದ ಮದುವೆಗೆ ಗ್ರೀನ್​ ಸಿಗ್ನಲ್​ ದೊರಕಿತ್ತು. ಇದೇ 
ಸಂತಸದಲ್ಲಿ ಬದುಕಿನ ಬಗ್ಗೆ ನೂರಾರು ಕನಸು ಕಂಡಿದ್ದ ಪ್ರೇಮಿಗಳಿಬ್ಬರು ತಿಂಗಳ ಅಂತರದಲ್ಲಿ ದುರಂತ ಅಂತ್ಯಕಂಡಿದ್ದಾರೆ. 

ಕಲಬುರಗಿ ನಗರದ ಯುವತಿ ಶೃತಿ ಹಾಗೂ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದ ಹನುಮಂತ ದುರಂತ ಅಂತ್ಯ ಕಂಡ ಪ್ರೇಮಿಗಳು. 

ಶೃತಿ ಹಾಗೂ ಹನುಮಂತ ಇಬ್ಬರೂ ಸಂಬಂಧಿಕರೇ. ಈ ಸಲುಗೆಯೇ ಇವರಿಬ್ಬರ ನಡುವಿನ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರಿಗೆ ಈ ವಿಚಾರ ತಿಳಿದ ಬಳಿಕ ಅವರೂ ಇಬ್ಬರ ಮದುವೆಗೆ ಸಮ್ಮತಿ ಸೂಚಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಯ್ತು, ಇನ್ನೇನು ಒಂದೆರಡು ವರ್ಷಗಳಲ್ಲಿ ಹಸಮಣೆ ಏರುತ್ತೇವೆ ಎಂದು ಖುಷಿಯಲ್ಲಿರುವಾಗಲೇ, ಹನುಮಂತನ ಇಹಲೋಕದ ಯಾತ್ರೆಯನ್ನೇ ಮುಗಿಸಿದ್ದ. 

ಒಂದು ತಿಂಗಳ ಹಿಂದೆ ಬಸವನಬಾಗೇವಾಡಿಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಹನುಮಂತ ಮೃತಪಟ್ಟಿದ್ದ. ಪ್ರಿಯಕರನ ಸಾವಿನ ಸುದ್ದಿ ಕೇಳಿ ಕಂಗಾಲಾದ ಪ್ರೇಯಸಿ ಶೃತಿ, ಅಂದಿನಿಂದ ಸರಿಯಾಗಿ ಆಹಾರವನ್ನೂ ಸೇವಿಸದೆ ಕಣ್ಣೀರಿಡುತ್ತಲೇ ಇದ್ದಳು. ಹನುಮಂತನಿಲ್ಲದೆ ಇರಲಾರೆ… ಎಂದು ಗುರುವಾರ ಸಂಜೆ  ತನ್ನ ಮನೆಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಲಬುರಗಿ ನಗರದ ಪಿಡಬ್ಲ್ಯೂಡಿ ಕ್ವಾಟರ್ಸ್​ನಲ್ಲಿ ಪಾಲಕರೊಂದಿಗೆ ವಾಸವಿದ್ದ ಶೃತಿ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಇದೀಗ‌ ಒಂದು ತಿಂಗಳ ಅಂತರದಲ್ಲಿ ಪ್ರೀತಿಸುತ್ತಿದ್ದ ಜೋಡಿ ದುರಂತ ಅಂತ್ಯ ಕಂಡಿದೆ. ಹೆತ್ತ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.

Ads on article

Advertise in articles 1

advertising articles 2

Advertise under the article

holige copy 1.jpg