ಬೆಂಗಳೂರು: ನಟಿ ಆವಂತಿಕಾ ಶೆಟ್ಟಿಯು ಕೆಲ ದಿನಗಳ ಹಿಂದೆ ನಟಿ ನಿಧಿ ಸುಬ್ಬಯ್ಯ ಅನುಭವಿಸಿರುವ ಬೇಸರ, ಕಿರಿಕಿರಿಯನ್ನು ಅನುಭವಿಸಿದ್ದಾರೆ. ಈ ಕುರಿತು ಆವಂತಿಕಾ ಶೆಟ್ಟಿಯವರೇ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. 
ಕೆಲವು ದಿನಗಳ ಹಿಂದೆ ನಟಿ ನಿಧಿ ಸುಬ್ಬಯ್ಯ ಬೆಡ್ ಕಂಪೆನಿಯೊಂದಕ್ಕೆ ಮಂಚವೊಂದನ್ನು ಒಂದನ್ನು ಆರ್ಡರ್ ಮಾಡಿದ್ದರು. ಆದರೆ ಆ ಕಂಪೆನಿಯವರು ಮೊದಲಿಗೆ ಅರ್ಧಮಂಚವನ್ನಷ್ಟೇ ಕಳಿಸಿದ್ದರು. ಬಳಿಕ ಒಂದು ವಾರಗಳಿಗೂ ಅಧಿಕ ಕಾಲ ಇ-ಮೇಲ್ ಹಾಗೂ ಮೇಲಿಂದ ಮೇಲೆ ದೂರವಾಣಿ ಕರೆಗಳನ್ನು ಮಾಡಿ ಒತ್ತಡ ಹಾಕಿದ ಬಳಿಕವಷ್ಟೇ ಇನ್ನೊಂದು ಭಾಗ ಕಳಿಸಿದ್ದರಂತೆ. 
ಅದಲ್ಲದೆ ಮಂಚದ ಉಳಿದ ಭಾಗವನ್ನು ಕಳಿಸಿ ಬಳಿಕ ಕಂಪೆನಿಯು ಕೈತೊಳೆದುಕೊಂಡಿದೆ. ಅರ್ಧರ್ಧ ಮಂಚವನ್ನು ಜಾಯಿಂಟ್ ಮಾಡಲು ಕಾರ್ಪೆಂಟರನ್ನು ಕಳಿಸಿರಲಿಲ್ಲ. ಬೆಂಗಳೂರು ಮೂಲದ ಈ ಕಂಪೆನಿಯಿಂದ ತುಂಬಾ ಹೆಚ್ಚಿನದ್ದನ್ನೇ ನಿರೀಕ್ಷಿಸಿದ್ದೆ. ಆದರೆ ಈ ರೀತಿಯಲ್ಲಿ ತೊಂದರೆ ನೀಡುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ನಿಧಿ ತಮಗಾದ ನೋವನ್ನು ಬಹಿರಂಗವಾಗಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು.
ಇದೀಗ ನಟಿ ಆವಂತಿಕಾ ಶೆಟ್ಟಿಯವರು ಇದೇ ರೀತಿಯದ್ದೇ ಬೇಸರವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡಿದ್ದಾರೆ. ಅವರು ವೈಮಾನಿಕ ಪ್ರಯಾಣದ ಸಂಸ್ಥೆಯೊಂದು ಸಮರ್ಪಕ ಸೇವೆ ಕೊಡಲಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆವಂತಿಕಾ ಶೆಟ್ಟಿ, ''ತನ್ನ ಫಾಲೋವರ್ಸ್ ಹಾಗೂ ಈ ಟ್ವೀಟ್ ನೋಡಿದವರು ಇವರಲ್ಲಿ ಫ್ಲೈಟ್ ಬುಕ್ ಮಾಡಬೇಡಿ" ಎಂದು ವಿನಂತಿಸಿಕೊಂಡಿದ್ದಾರೆ.
ಅಲ್ಲದೆ ಹಿಂಪಾವತಿ ಅವಕಾಶಕ್ಕೆ ಆವಂತಿಕಾ ಶೆಟ್ಟಿ ಪ್ರಯತ್ನ ಪಟ್ಟಿದ್ದರು ಎಂದು ಹೇಳಿಕೊಂಡಿದ್ದಾರೆ. "ತಾನು 7 ಸಾವಿರ ರೂ. ಮೊತ್ತದ ಟಿಕೆಟ್ ಕಾಯ್ದಿರಿಸಿದರೆ, ಟಿಕೆಟ್ ರದ್ದು ಮಾಡಿದಾಗ ಬರೀ 700 ರೂ. ಮಾತ್ರ ಹಿಂದಕ್ಕೆ ಕೊಟ್ಟಿದ್ದಾರೆ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.