-->

Alvas begins certificate course- ಆಳ್ವಾಸ್: ಬಹುಬೇಡಿಕೆಯ ಸರ್ಟಿಫಿಕೇಟ್ ಕೋರ್ಸಿಗಳಿಗೆ ಚಾಲನೆ

Alvas begins certificate course- ಆಳ್ವಾಸ್: ಬಹುಬೇಡಿಕೆಯ ಸರ್ಟಿಫಿಕೇಟ್ ಕೋರ್ಸಿಗಳಿಗೆ ಚಾಲನೆ

ಆಳ್ವಾಸ್: ಬಹುಬೇಡಿಕೆಯ ಸರ್ಟಿಫಿಕೇಟ್ ಕೋರ್ಸಿಗಳಿಗೆ ಚಾಲನೆ






ಮೂಡುಬಿದಿರೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರಾಮ್ಕೊ ಸಿಮೆಂಟ್ ಕಂಪೆನಿ ಸಹಾಯಕ ಜನರಲ್ ಮ್ಯಾನೇಜರ್ ಸೂರಜ್ ಕುಮಾರ್ ಹೇಳಿದರು.



ಮಿಜಾರಿನ ಆಳ್ವಾಸ್ ತಾಂತ್ರಿಕ ವiಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕ್ವಾಲಿಟಿ ಎಶುರೆನ್ಸ್, ಕ್ವಾಲಿಟಿ ಕಂಟ್ರೋಲ್ ಹಾಗೂ ಕ್ವಾಟಿಂಟಿ ಸರ್ವಯರ್ ಕೋರ್ಸಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಟಿಫಿಕೇಟ್ ಕೋರ್ಸುಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನ ಆದ್ಯತೆಯೂ ಆಗಿದೆ. ವಿಶ್ವಮಟ್ಟದಲ್ಲಿ ಉದ್ಯೋಗ ಗಳಿಸಲು ತಾಂತ್ರಿಕ ಶಿಕ್ಷಣದ ಜತೆಯಲ್ಲಿ ಕೌಶಲ್ಯಾಭಿವೃದ್ಧಿಯೂ ಆಗಬೇಕೆಂದರು.



ಕಾರ್ಯಕ್ರಮದ ಸಂಯೋಜಕ ಪ್ರೊ. ವರದರಾಜ ಕೆ ಎಸ್ ಅವರು ಕೋರ್ಸ್‍ನ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಹುಬೇಡಿಕೆಯಲ್ಲಿರುವ ಫಯರ್ ಆಡ್ ಸೇಫ್ಟಿ, ಎಮ್‍ಇಪಿ, ಆಯಿಲ್ ಹಾಗೂ ಗ್ಯಾಸ್ ಮುಂತಾದ ವಿಷಯಗಳನ್ನು ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‍ನಲ್ಲಿ ಆಳವಡಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. 

Ads on article

Advertise in articles 1

advertising articles 2

Advertise under the article