-->
ಇಲ್ಲೊಬ್ಬಳು 'ಹೂಸು' ಮಾರಿ ವಾರಕ್ಕೆ 38 ಲಕ್ಷ ರೂ. ಗಳಿಸುತ್ತಾಳಂತೆ!

ಇಲ್ಲೊಬ್ಬಳು 'ಹೂಸು' ಮಾರಿ ವಾರಕ್ಕೆ 38 ಲಕ್ಷ ರೂ. ಗಳಿಸುತ್ತಾಳಂತೆ!

ಹೈದರಾಬಾದ್​​: ಒಬ್ಬೊಬ್ಬರು  ಜೀವನೋಪಾಯಕ್ಕಾಗಿ ಹೇಗೆಗೆಲ್ಲಾ ಕಷ್ಟಪಟ್ಟು ದುಡಿಯುತ್ತಾರೆ. ಅದಕ್ಕಾಗಿ ಎಂತಹ, ಸಾಹಸಕ್ಕಾದರೂ ಕೈಹಾಕುತ್ತಾರೆ. ಆದರೂ ಪಾಪ ಒಂದೊಂದು ರೂಪಾಯಿ ಕಾಸು ಒಟ್ಟು ಮಾಡುವುದಕ್ಕೂ ಏನೆನೆಲ್ಲಾ ಕಷ್ಟ ಪಡುತ್ತಾರೆ. ಆದರೆ ಕೆಲವರ ಅದೃಷ್ಟವೋ ಏನೋ ಲಕ್ಷ್ಮಿ ಕುಳಿತಲ್ಲಿಯೇ ಒಲಿದುಬಿಡುತ್ತಾಳೆ. ಏನೂ ಕೆಲಸ ಮಾಡದಿದ್ದರೂ ಸರಿ ಅವರಿದ್ದಲ್ಲಿಗೇ ಕಾಸು ಕಾಲಬುಡಕ್ಕೆ ಬಂದು ಬೀಳುತ್ತದೆ. 

ಅದರಲ್ಲೂ ಸೆಲೆಬ್ರಿಟಿಗಳಿಗಂತೂ ಏನು ಹಣದ ಹೊಳೆಯೇ ಹರಿದು ಬಿಡುತ್ತದೆ‌. ಅವರಿಗೆ ಜನರ ಹುಚ್ಚು ಅಭಿಮಾನ ಅದೆಷ್ಟು ಇರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಹುಚ್ಚು ಅಭಿಮಾನದ ಪ್ರತೀಕವಾಗಿ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇವೆ. ಇಂತಹ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಟಿವಿ ರಿಯಾಲಿಟಿ ಷೋ ತಾರೆ ಸ್ಟೇಫನಿ ಮಾಟಿಯೋ ಎಂಬ ಸುಂದರಿ ಹಣ ಗಳಿಸಲು ಮಾಡುವ ಕೆಲಸ ಏನೆಂದು ಕೇಳಿದರೆ ಯಾರಾದರೂ ‘ಥೂ ಅಸಹ್ಯ’ ಎಂದು ಮೂಗು ಮುಚ್ಚಿಕೊಳ್ಳಬಹುದು. ಅಥವಾ ಇದನ್ನು ಸುಳ್ಳು ಸುದ್ದಿ ಎಂದೂ ಹೇಳಬಹುದು. ಏನೇ ಆದರೂ ಇದು ಮಾತ್ರ ಸತ್ಯ. 


ಈ ಬಗ್ಗೆ ಸ್ವತಃ ಸ್ಟೇಫನಿ ಮಾಟಿಯೋನೇ ವರ್ಣಿಸಿದ್ದಾಳೆ. ಈಕೆಯ ‘ಫಲಾನುಭವಿಗಳು’ ಕೂಡ ಬಹಳ ಸಂತಸದಿಂದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈಕೆ ಮಾಡುತ್ತಿರುವ ಕೆಲಸವೇನೆಂದರೆ ತಾನು ಬಿಡುವ 'ವಾಯು' ಅಂದರೆ ಆಡುಭಾಷೆಯಲ್ಲಿ ಹೇಳುವ ‘ಹೂಸ’ ಮಾರಿ ಲಕ್ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾಳಂತೆ. 

ಇದೇನಪ್ಪ ಹೂಸನ್ನು ಮಾರೋದು ಹೇಗೆ ಎಂದು ಅಂದುಕೊಳ್ಳುತ್ತಿದ್ದೀರಾ. ಈಕೆ ತನ್ನ ಹೂಸನ್ನು ಜಾರ್​ನಲ್ಲಿ ಹೂವಿನ ದಳಗಳಿಂದ ಪ್ಯಾಕ್ ಮಾಡಿ ತನ್ನ ಅಭಿಮಾನಿಗಳಿಗೆ ನೀಡುತ್ತಿದ್ದಾಳಂತೆ. ಹೀಗೆ ಮಾಡುವುದರಿಂದ ಹೂವಿನ ದಳಗಳು ಇನ್ನಷ್ಟು ಪರಿಮಳಯುಕ್ತವಾಗಿಸುತ್ತವಂತೆ. ಈಕೆಯ ಅಭಿಮಾನಿಗಳಿಂದ ಹೂಸಿಗೆ ಬೇಡಿಕೆ ಬರುತ್ತಲೇ ಇದೆಯಂತೆ. ಆದರೆ ಇದು ಸತ್ಯ. ತನ್ನ ಹೂಸನ್ನು ಮಾರಾಟ ಮಾಡಿ ಈಕೆ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಾಳಂತೆ. ಈ ಬಗ್ಗೆ ಈಕೆಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.

ರಿಯಾಲಿಟಿ ಟಿವಿ ಶೋ ’90 ಡೇ ಫಿಯಾನ್ಸಿ’ ನಲ್ಲಿ ಕಾಣಿಸಿಕೊಂಡ ಬಳಿಕ ಸ್ಟೇಫನಿ ಮಾಟಿಯೋ ಮೊದಲ ಬಾರಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಳಂತೆ. ಆ ಬಳಿಕ ತನ್ನದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದಾಳೆ. ಅಷ್ಟಕ್ಕೂ ಈಕೆಯ ಹೂಸನ್ನು ಪಡೆದುಕೊಳ್ಳುವ  ಅಭಿಮಾನಿಗಳು ಅದೇನು ಮಾಡುತ್ತಾರೋ ಗೊತ್ತಿಲ್ಲ.

ಈಕೆ ಹೆಚ್ಚು ಹೆಚ್ಚು ಹೂಸಿಗಾಗಿ ಬೀನ್ಸ್, ಮೊಸರು, ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವ ಮೂಲಕ ಗ್ಯಾಸ್​​ನನ್ನು ಹೆಚ್ಚು ಮಾಡಿಕೊಳ್ಳುತ್ತಾಳಂತೆ. ಈಕೆಯ ಮಾರಾಟ ಇಷ್ಟಕ್ಕೇ ಮುಗಿದಿಲ್ಲ. ಇವಳು ಧರಿಸುವ ಬ್ರಾಗಳು, ಪ್ಯಾಂಟಿಗಳು, ಬಟ್ಟೆ ಮತ್ತು ಸಾಬೂನುಗಳಿಗೂ ಬೇಡಿಕೆಯಿದ್ದು ಇದನ್ನೂ ಮಾರಾಟ ಮಾಡುತ್ತಿದ್ದಾಳಂತೆ.

Ads on article

Advertise in articles 1

advertising articles 2

Advertise under the article

holige copy 1.jpg