-->
35 ವರ್ಷಗಳ ಲವ್ ಸಕ್ಸೆಸ್: ವಿವಾಹ ಸಂಭ್ರಮದಲ್ಲಿ ವಯೋವೃದ್ಧ ಜೋಡಿ

35 ವರ್ಷಗಳ ಲವ್ ಸಕ್ಸೆಸ್: ವಿವಾಹ ಸಂಭ್ರಮದಲ್ಲಿ ವಯೋವೃದ್ಧ ಜೋಡಿ

ಮಂಡ್ಯ: ಇದಪ್ಪ ನಿಜವಾದ ಪ್ರೀತಿಯೆಂದರೆ. ಪ್ರೀತಿಸಿದ ಈ ಜೋಡಿ ಮದುವೆಯಾಗಲು ಕಾದದ್ದು ಮಾತ್ರ ಒಂದೆರಡು ವರ್ಷವಲ್ಲ. ಬರೋಬ್ಬರಿ 35 ವರ್ಷ ಕಾದಿದೆ. ಈ ಮೂಲಕ ಪ್ರೀತಿಯ ಮುಂದೆ ಐಶ್ವರ್ಯ, ಹಣ, ಅಂತಸ್ತು, ವಯಸ್ಸು ಯಾವುದೂ ಅಡ್ಡಿಯಾಗೋದಿಲ್ಲ ಎಂಬುದನ್ನು ಈ ಜೋಡಿ ಸಾಬೀತುಪಡಿಸಿದೆ. 

ಪ್ರೇಯಸಿಗಾಗಿ ಬರೋಬ್ಬರಿ 35 ವರ್ಷಗಳ ಕಾಲ ಕಾದು ತಾನು ಇಷ್ಟಪಟ್ಟಾಕೆಯೊಂದಿಗೆ ಪ್ರಿಯಕರ ಸಪ್ತಪದಿ ತುಳಿದಿರೋದು ಮೇಲುಕೋಟೆಯಲ್ಲಿ. ತಮ್ಮ 65ನೇ ವಯಸ್ಸಿಗೆ ಮನದನ್ನೆಯೊಂದಿಗೆ ಸಪ್ತಪದಿ ತುಳಿದ ಪ್ರೇಮಿ ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ. ಇವರು ಮದುವೆಯಾಗಿರೋದು ಜಯಮ್ಮ ಎಂಬಾಕೆಯನ್ನು. ಇದೀಗ ಇವರ ಮದುವೆ ಫೋಟೋ ಸಖತ್ ವೈರಲ್ ಆಗುತ್ತಿದೆ.

ಚಿಕ್ಕಣ್ಣ ಅವರು ಜಯಮ್ಮನವರನ್ನು ಪ್ರೀತಿಸುತ್ತಿದ್ದರು. ಆದರೆ ಜಯಮ್ಮನವರಿಗೆ ಬೇರೊಬ್ಬರೊಂದಿಗೆ ವಿವಾಹವಾಗಿತ್ತು. ಆದರೆ ಮಕ್ಕಳು ಆಗಿರಲಿಲ್ಲ.‌ ಆದರೆ ಜಯಮ್ಮರನ್ನು ಆಕೆಯ ಪರಿ ತೊರೆದು ಹೋಗಿದ್ದ. 

ಇತ್ತ ಜಯಮ್ಮನವರನ್ನು ಚಿಕ್ಕಣ್ಣ ಅಪಾರವಾಗಿ ಪ್ರೀತಿಸುತ್ತಿದ್ದರು. ಆಕೆಯ ಗುಂಗಿನಲ್ಲಿಯೇ ಬರೋಬ್ಬರಿ 35 ವರ್ಷಗಳನ್ನು ಕಳೆದರು. ಕೊನೆಗೂ ಚಿಕ್ಕಣ್ಣನವರ ಪ್ರಾಂಜಲ ಮನಸ್ಸಿನ ಪ್ರೀತಿಗೆ ಕರಗಿದ ದೇವರು ಅವರ ಮದುವೆಗೆ ಅಸ್ತು ಎಂದಿದ್ದಾನೆ.

ಇದೀಗ ಇವರ 35 ವರ್ಷಗಳ ಪ್ರೀತಿ ಸಕ್ಸಸ್ ಆಗಿದ್ದು, ಈ ಜೋಡಿ ಮೇಲುಕೋಟೆ ಶ್ರೀ ಚೆಲುವರಾಯಸ್ವಾಮಿ ದೇವಾಲಯ ‌ಮುಂಭಾಗದ ಶ್ರೀನಿವಾಸ್ ಗುರೂಜಿ ಅವರ ಆಶ್ರಮದಲ್ಲಿ ಗುರುವಾರ ಸಪ್ತಪದಿ ತುಳಿದಿದೆ. ಇದೀಗ  ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Ads on article

Advertise in articles 1

advertising articles 2

Advertise under the article