ಬೆಂಗಳೂರು: ತನ್ನ ಅಜ್ಜಿಯೊಂದಿಗೆ ಫ್ಲ್ಯಾಟ್ ನೋಡಲೆಂದು ಹೋಗಿದ್ದ 2 ವರ್ಷದ ಮಗುವೊಂದು ಐದನೇ ಮಹಡಿಯಿಂದ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ಸಂಭವಿಸಿದೆ.
ದಿವ್ಯಾಂಶ್ ರೆಡ್ಡಿ (2) ಮೃತ ಮಗು. ಇಲೆಕ್ಟ್ರಾನಿಕ್ ಸಿಟಿಯ ಇನ್ವೆಸ್ಮೆಂಟ್ ಲೇಔಟ್ನಲ್ಲಿ ಈ ಅವಘಡ ಸಂಭವಿಸಿದೆ.
ದಿವ್ಯಾಂಶ್ ರೆಡ್ಡಿಯ ಅಜ್ಜಿ ಹಲ ದಿನಗಳಿಂದ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು. ನಿನ್ನೆ ಸಂಜೆ ವೇಳೆಗೆ ಇನ್ವೆಸ್ಮೆಂಟ್ ಲೇಔಟ್ನ ಅಪಾರ್ಟ್ಮೆಂಟ್ವೊಂದರಲ್ಲಿನ ಫ್ಲ್ಯಾಟ್ ನೋಡಲು ಹೋಗಿದ್ದಾರೆ. ಆಗ ದಿವ್ಯಾಂಶ್ನನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಅಜ್ಜಿ ಫ್ಲ್ಯಾಟ್ ನೋಡುತ್ತಿದ್ದ ಸಂದರ್ಭ ದಿವ್ಯಾಂಶ್ ರೆಡ್ಡಿ ಆಯತಪ್ಪಿ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮಗುವಿನ ಸಾವಿನಿಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈಬಗ್ಗೆ ಇಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.