ನವದೆಹಲಿ: ಜಿಯೋ 1 ರೂ.ಗೆ 100 MB ಡೇಟಾವನ್ನು 30 ದಿನಗಳವರೆಗೆ ಆನಂದಿಸಿ ಎಂದು ಡಿ.15ರಂದು ಭಾರಿ ಆಫರೊಂದನ್ನು ಬಿಡುಗಡೆಯಾಗಿತ್ತು. ಇದನ್ನು ಕೇಳಿದ ಗ್ರಾಹಕರು ಮುಗಿಬಿದ್ದು ಈ ಆಫರ್ ನ ಪ್ರಯೋಜನ ಪಡೆದುಕೊಂಡರು. ಇನ್ನು ಕೆಲವರು ಇರಲಿ, ಇನ್ನೊಂದೆರಡು ದಿನಗಳಲ್ಲಿ ಚಾರ್ಜ‌್ ಮಾಡಿಸಬಹುದು ಎಂದು ಸುಮ್ಮನಾಗಿದ್ದರು.
ಆದರೆ ಸುಮ್ಮನಾದವರಿಗೆ ಜಿಯೋ ಭಾರಿ ಆಘಾತವೊಂದನ್ನು ನೀಡಿದೆ. ಏಕೆಂದರೆ 1 ರೂ. ಯೋಜನೆ ಈಗಲೂ ಇದೆ. ಆದರೆ ಅದು 100 ಎಂಬಿಗೆ ಬದಲು 10 ಎಂಬಿಗೆ ಇಳಿದಿದೆ. 30 ದಿನಗಳ ವ್ಯಾಲಿಡಿಟಿ 1 ದಿನಕ್ಕೆ ಇಳಿದಿದೆ. ಅಂದರೆ 1 ರೂ. ರೀಚಾರ್ಜ್ ಮಾಡಿದರೆ 1 ದಿನ 10 ಎಂಬಿ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಯಾವುದೇ ಕರೆ, ಎಸ್ಎಂಎಸ್ ಪ್ರಯೋಜನ ಇಲ್ಲ.
ಇದರ ಹೊರತಾಗಿ 119 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಜಿಯೋ ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರು ಪ್ರತಿದಿನವೂ 1.5 ಜಿಬಿ ಡೇಟಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಜತೆಗೆ ಪ್ರತಿದಿನ 300 ಎಸ್‌ಎಂಎಸ್, ಉಚಿತ ಕರೆಗಳು ಲಭ್ಯ ಇವೆ. ಆದರೆ ಈ ಯೋಜನೆಯು 14 ದಿನಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಜಿಯೋದ 299 ರೂ. ಪ್ರಿಪೇಯ್ಡ್ ಯೋಜನೆಯೂ ಇದ್ದು, ಇದರಲ್ಲಿ ಪ್ರತಿದಿನ 2 ಜಿಬಿ ಡೇಟಾ, 100 ಉಚಿತ ಎಸ್‌ಎಂಎಸ್, ಉಚಿತ ಕರೆಗಳ ಜತೆಗೆ 28 ದಿನಗಳ ವ್ಯಾಲಿಡಿಟಿ ಪಡೆಯಬಹುದು.