Udupi: ಕಾಮುಕರಿಬ್ಬರಿಂದ 8ರ ಹರೆಯದ ಅಪ್ರಾಪ್ತೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ!

ಉಡುಪಿ: 8ರ ಹರೆಯದ ಅಪ್ರಾಪ್ತೆಯ ಮೇಲೆ ಇಬ್ಬರು ಸಂಬಂಧಿ ಯುವಕರೇ ಎರಡು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹಿರಿಯಡಕ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸಂದೀಪ್‌ ನಾಯ್ಕ ಹಾಗೂ ವಿಘ್ನೇಶ್‌ ನಾಯ್ಕ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ವೃತ್ತಿಯಲ್ಲಿ ಪೈಂಟರ್‌ ಆಗಿರುವ ಸಂದೀಪ್‌ ನಾಯ್ಕ ವಿವಾಹಿತನಾಗಿದ್ದು, ವಿಘ್ನೇಶ್‌ ನಾಯ್ಕ ಕೂಡಾ ಸ್ಥಳೀಯವಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಈ ಇಬ್ಬರ ಮೇಲೆ ಈ ಹಿಂದೆಯೂ ಇಂತಹ ಆರೋಪಗಳು ಸ್ಥಳೀಯವಾಗಿ ಕೇಳಿಬಂದಿತ್ತು.

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಬಾಲಕಿಯ ಹೆತ್ತವರಿಬ್ಬರೂ ಕೆಲಸಕ್ಕೆಂದು ಮನೆಯಿಂದ ಹೊರ ಹೋದವರು ರಾತ್ರಿ ವೇಳೆಗೆ ಮನೆಗೆ ಮರಳುತ್ತಿದ್ದರು. ಈ ಸಂದರ್ಭ ಬಾಲಕಿ ಓರ್ವಳೇ ಮನೆಯಲ್ಲಿರುತ್ತಿದ್ದಳು. ಬಾಲಕಿಗೆ ನಿನ್ನ ತಂದೆ - ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿ ಈ ಇಬ್ಬರೂ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.