ಖಾಸಗಿ ಫೋಟೋ ಇಟ್ಟುಕೊಂಡು ಬೆದರಿಕೆ ಒಡ್ಡತ್ತಿದ್ದ ಮಾಜಿ ಪ್ರಿಯಕರನ ಮೊಬೈಲ್ ದರೋಡೆಗೈಯಲು ಸುಪಾರಿ ನೀಡಿದಳು ಪ್ರೇಯಸಿ

ಬೆಂಗಳೂರು: ಅವರಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಸಲುಗೆಗೆ ತಿರುಗಿ ಇಬ್ಬರೂ ಏಕಾಂತದಲ್ಲಿ ಸಾಕಷ್ಟು ಕಾಲ ಕಳೆದಿದ್ದರು. ಆತ ಆ ಸಂದರ್ಭದ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಆದರೆ ಅದೇನಾಯಿತು ಗೊತ್ತಿಲ್ಲ? ಎರಡು ವರ್ಷಗಳ ಪ್ರೀತಿಗೆ ಆಕೆ ತಿಲಾಂಜಲಿ ಬಿಟ್ಟಿದ್ದಾಳೆ. 

ಆದರೆ ಇತ್ತ ಪ್ರಿಯಕರ ಆಕೆಯೊಂದಿಗೆ ಇದ್ದ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಪ್ರಿಯತಮೆಗೆ ಬ್ಲ್ಯಾಕ್​ಮೇಲ್​ ಮಾಡತೊಡಗಿದ್ದಾನೆ. ಇದರಿಂದ ಕೆರಳಿದ ಯುವತಿ ತನ್ನ ಸ್ನೇಹಿತನೊಂದಿಗೆ ಮಾಜಿ ಪ್ರಿಯಕರನಿಗೆ ಬುದ್ಧಿ ಕಲಿಸೋಕೆ ಹೇಳಿದ್ದಾರೆ. ಆ ಬಳಿಕ ನಡೆದಿದ್ದೇ ರಾಬರಿ ಎಂಬ ಹೈಡ್ರಾಮಾ.

ಕೊಡುಗೆಹಳ್ಳಿಯ ಕಾಂತಿ ಸ್ವೀಟ್ಸ್ ಶಾಪ್​​ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಎಂಬ ಯುವಕ 2 ವರ್ಷಗಳ ಹಿಂದೆ ಯುವತಿಯೊಬ್ಬಳ ಪ್ರೀತಿಯ ಬಲೆಗೆ ಬಿದ್ದಿದ್ದ. ಇಬ್ಬರ ನಡುವೆ ಸಲುಗೆ ಅತೀ ಹೆಚ್ಚಾಗಿ ದೈಹಿಕ ಸಂಬಂಧ ಬನೀಡಿರುವ. ಈ ವೇಳೆ ಆಕೆಯ ಖಾಸಗಿ ಫೋಟೋಗಳನ್ನು ಪ್ರಿಯಕರ ತನ್ನ ಮೊಬೈಲ್​ನಲ್ಲಿ ಕ್ಲಿಕ್ಕಿಸಿಕೊಂಡಿದ್ದಾನೆ.  ದೂರವಾಗಿದ್ದರು. ಏಕಾಏಕಿ ಪ್ರಿಯತಮೆ ದೂರವಾಗಿರೋದರಿಂದ ಕುಪಿತನಾದ ಸಂತೋಷ್ ಮಾಜಿ ಪ್ರಿಯತಮೆಯ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ ಲೈಂಗಿಕವಾಗಿಯೂ ಸಹಕರಿಸುವಂತೆ ಬೆದರಿಸಲು ತೊಡಗಿದ್ದಾನೆ. ಇಲ್ಲದಿದ್ದರೆ ತನ್ನೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಬೆದರಿಸಿದ್ದಾನೆ. 

                    ಮಾಜಿ ಪ್ರಿಯಕರ ಸಂತೋಷ್

ಪರಿಣಾನ ಹೆದರಿದ ಯುವತಿ, ತನ್ನ ಸ್ನೇಹಿತನಿಗೆ ವಿಚಾರವನ್ನು ತಿಳಿಸಿ ಖಾಸಗಿ ಫೋಟೋಗಳಿದ್ದ ಆ ಮೊಬೈಲ್ ಫೋನ್ ಅನ್ನು ಅವನಿಂದ ಕಿತ್ತುಕೊಂಡು ಬರುವಂತೆ ಹೇಳಿದ್ದಾಳೆ. ಅದರಂತೆ ನ.16ರಂದು ಮಧ್ಯರಾತ್ರಿ ತೆರಳಿದ್ದ ನಾಲ್ಕು ಜನರ ತಂಡ ಸಂತೋಷ್ ನಿವಾಸಕ್ಕೆ ತೆರಳಿ ಮನೆಯಲ್ಲಿದ್ದ ಮೂರು ಮೊಬೈಲ್​​ಗಳನ್ನು ದರೋಡೆ ಮಾಡಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಕೊಡಿಗೆಹಳ್ಳಿ ಠಾಣೆಯಲ್ಲಿ ಮೊಬೈಲ್ ದರೋಡೆ ಪ್ರಕರಣ ದಾಖಲಾಗಿತ್ತು. ಅಪರಿಚಿತರು ಮನೆಗೆ ನುಗ್ಗಿ ಪೆಪ್ಪರ್ ಸ್ಪ್ರೇ ಹಾಕಿ ಮೊಬೈಲ್ ಫೋನ್ ದರೋಡೆಗೈದಿದ್ದಾರೆಂದು ಸಂತೋಷ್ ನೀಡಿರುವ ದೂರಿನನ್ವಯ ಆರೋಪಿಗಳ ವಿಚಾರಣೆ ಮಾಡಿದಾಗ ಅಸಲಿಯತ್ತು ಬಯಲಾಗಿದೆ. 

ಈ ಘಟನೆಗೆ ಸಂಬಂಧಿಸಿದಂತೆ ಆಕಾಶ್, ನಂಜುಂಡಸ್ವಾಮಿ, ಎರ್ರಿಸ್ವಾಮಿ ಎಂಬ ಮೂವರನ್ನು ಬಂಧಿಸಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇತ್ತ ಯುವತಿ ತನ್ನ ಮೊಬೈಲ್​​ನಲ್ಲಿ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಎಂದು ನೀಡಿರುವ ದೂರಿನಡಿ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ.