ಪತಿ ಡೈನಿಂಗ್‌ ಟೇಬಲ್‌ ಖರೀದಿಸಿಲ್ಲವೆಂದು ಪತ್ನಿ ಆತ್ಮಹತ್ಯೆ

ನಾಗಪುರ: ದೀಪಾವಳಿಯಂದು ಪತಿ ಡೈನಿಂಗ್‌ ಟೇಬಲ್‌ ಖರೀದಿಸಿ ತಂದಿಲ್ಲವೆಂದು ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಹುಡ್ಕೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಟೇಕ್‌ ಆಫ್‌ ಸಿಟಿ ಪರಿಸರದಲ್ಲಿ ನಡೆದಿದೆ. 

ಸಂಗೀತಾ ರಾಜನ್‌ ಪಾಟೀಲ್‌ ಮೃತಪಟ್ಟ ಮಹಿಳೆ.

ಸಂಗೀತಾ ಪತಿ ರಾಜನ್‌ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಗೀತಾ ತಮ್ಮ ಪತಿಯಲ್ಲಿ ದೀಪಾವಳಿಯಂದು ಡೈನಿಂಗ್‌ ಟೇಬಲ್‌ ತರುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೆ ಹಣಕಾಸಿನ ಕೊರತೆಯಿಂದ ಸ್ವಲ್ಪ ದಿನಗಳ ಬಳಿಕ ಡೈನಿಂಗ್‌ ಟೇಬಲ್‌ ತರುತ್ತೇನೆ ಎಂದು ರಾಜನ್‌ ಹೇಳಿದ್ದರು.

ಆದರೆ ಇದರಿಂದ ಅಸಮಾಧಾನಗೊಂಡ ಸಂಗೀತಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜನ್ ನೀಡಿರುವ ಮಾಹಿತಿ ಮೇರೆಗೆ ಹುಡ್ಕೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹದ ಮಹಜರು ಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.