-->
ಪತಿ - ಪತ್ನಿಯ ಮಧ್ಯೆ ವಿರಸ ಮೂಡಿಸಿದ್ದ ಪೊಲೀಸ್ ಪೇದೆಯಿಂದಲೇ ವಿವಾಹಿತೆ ಆತ್ಮಹತ್ಯೆ: ಕಾನ್ ಸ್ಟೇಬಲ್ ಪರಾರಿ

ಪತಿ - ಪತ್ನಿಯ ಮಧ್ಯೆ ವಿರಸ ಮೂಡಿಸಿದ್ದ ಪೊಲೀಸ್ ಪೇದೆಯಿಂದಲೇ ವಿವಾಹಿತೆ ಆತ್ಮಹತ್ಯೆ: ಕಾನ್ ಸ್ಟೇಬಲ್ ಪರಾರಿ

ಚಿಕ್ಕಬಳ್ಳಾಪುರ: ಪೊಲೀಸ್ ನೊಬ್ಬನ  ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆಯೋರ್ವಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಇದೀಗ ಪೊಲೀಸ್ ಕಾನ್​ಸ್ಟೆಬಲ್​ ತಲೆಮರೆಸಿಕೊಂಡಿದ್ದಾನೆ.  

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಅನಂತ ಕುಮಾರ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳೆನ್ನಲಾದ ವಿವಾಹಿತೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ಸಾವಿಗೀಡಾಗಿರುವ ವಿವಾಹಿತೆಯ ಪಾಲಕರು ಪೊಲೀಸ್ ಪೇದೆ ಅನಂತಕುಮಾರ್ ವಿರುದ್ಧ ದೂರು ನೀಡಿದ್ದು, ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೊಲೀಸ್ ಪೇದೆಯು ಗಂಡ-ಹೆಂಡಿರ ಮಧ್ಯೆ ಜಗಳ ತಂದಿಟ್ಟು, ಅದರ ದುರ್ಲಾಭ ಪಡೆದು ಅಕ್ರಮ ಸಂಬಂಧ ಹೊಂದಿದ್ದ. ಬಳಿಕ ಇವರಿಬ್ಬರ ಮಧ್ಯೆಯೂ ಜಗಳ ನಡೆದು ಈ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಹಣದ ಆಮಿಷವೊಡ್ಡಿ ವಿವಾಹಿತೆಯನ್ನು ಗಂಡನಿಂದ ದೂರ ಮಾಡಿದ್ದ ಪೇದೆ, ಜೀವಬೆದರಿಕೆಯನ್ನೂ ಒಡ್ಡಿದ್ದ ಎಂಬ ಆರೋಪವಿದೆ. 

Ads on article

Advertise in articles 1

advertising articles 2

Advertise under the article