-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪ್ರಥಮ ರಾತ್ರಿ ಹತ್ತಿರ ಬರಲು ಒಲ್ಲೆ ಎಂದ ಪತ್ನಿ: ಆಕೆ ಕೊಟ್ಟ ಕಾರಣದಿಂದ ಪತಿಯ ದಿಟ್ಟ ನಿರ್ಧಾರಕ್ಕೆ ಎಲ್ಲರೂ ಶಾಕ್!

ಪ್ರಥಮ ರಾತ್ರಿ ಹತ್ತಿರ ಬರಲು ಒಲ್ಲೆ ಎಂದ ಪತ್ನಿ: ಆಕೆ ಕೊಟ್ಟ ಕಾರಣದಿಂದ ಪತಿಯ ದಿಟ್ಟ ನಿರ್ಧಾರಕ್ಕೆ ಎಲ್ಲರೂ ಶಾಕ್!

ಉತ್ತರ ಪ್ರದೇಶ: ಮದುವೆಯಾದ ಮೊದಲ ರಾತ್ರಿಯೇ ಪತ್ನಿ ತಾನು ಬೇರೆಯವನನ್ನು ಪ್ರೀತಿಸುತ್ತಿದ್ದೇನೆ ಎಂದರೆ ಎಂತಹ ಯುವಕನಿಗೂ ಯಾವ ರೀತಿಯ ಶಾಕ್ ಆಗಿರಬೇಡ. ಆದರೆ ಇಲ್ಲೊಬ್ಬ ಪತಿಯು ತಾನೇ ಮುಂದೆ ನಿಂತು ಪತ್ನಿಗೆ ಆಕೆಯ ಪ್ರಿಯತಮನೊಂದಿಗೇ ಮದುವೆ ಮಾಡಿಸಿರುವ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಗುರುಗ್ರಾಮದಲ್ಲಿ. ಅಕೌಂಟೆಂಟ್ ಆಗಿರುವ ಪಂಕಜ್ ಶರ್ಮಾ ಅವರೇ ಪತ್ನಿ ಕೋಮಲ್‌ ಗೆ ಆಕೆಯ ಪ್ರಿಯತಮನೊಂದಿಗೇ ವಿವಾಹ ಮಾಡಿದವರು. ಇವರಿಬ್ಬರ ವಿವಾಹ ಈ ವರ್ಷದ ಮೇ ತಿಂಗಳಿನಲ್ಲಿ ನಡೆದಿತ್ತು. ಆದರೆ ಪ್ರಥಮ ರಾತ್ರಿಯಂದು ಪತ್ನಿ ಹತ್ತಿರ ಬರಲು ಒಲ್ಲೆ ಎಂದಳು. ಕಾರಣ ಕೇಳಿದಾಗ ಪತ್ನಿ ತನ್ನ ಪ್ರೇಮಕಥೆಯನ್ನು ಬಿಚ್ಚಿಟ್ಟಿದ್ದಾಳೆ. 

ಆಗಲೇ ಪಂಕಜ್‌‌ ಶರ್ಮಾ ತಮ್ಮ ಪತ್ನಿಯನ್ನು ಹೇಗಾದರೂ ಮಾಡಿ ಆಕೆಯ ಪ್ರಿಯತಮ ಪಿಂಟುವಿನೊಂದಿಗೆ ಸೇರಿಸಬೇಕೆಂಬ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಬಿಟ್ಟರು. ಆತ ತನ್ನ ನಿರ್ಧಾರವನ್ನು ಪತ್ನಿಯ ಅಪ್ಪ ಅಮ್ಮನಿಗೆ ಹೇಳಿದ್ದಾರೆ. ಈ ವಿಚಾರವನ್ನು ಕೇಳಿ ಅವರು ಶಾಕ್‌ ಆಗಿದ್ದಾರೆ. ಅವರು ಮಗಳಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ. 

ಆದರೆ ಖುದ್ದು ಪಂಕಜ್‌ ಅವರೇ ಆಕೆಯ ಅಪ್ಪ-ಅಮ್ಮನ ಬಳಿ ಮಾತನಾಡಿ, ಆಕೆಯ ಇಚ್ಛೆಗೆ ವಿರುದ್ಧವಾದ ಮದುವೆಯಿಂದ ಏನೂ ಪ್ರಯೋಜನವಿಲ್ಲ. ಮನಸ್ಸು ಓರ್ವನಿಗೆ ದೇಹ ಮತ್ತೋರ್ವನಿಗೆ ಕೊಡುವುದು ಸಾಧ್ಯವಿರದ ಮಾತು ಎಂದು ಅತ್ತೆ-ಮಾವನಿಗೆ ಬುದ್ಧಿ ಹೇಳಿ ಪತ್ನಿಯ ಪ್ರಿಯಕರ ಬಳಿ ಹೋಗಿದ್ದಾರೆ. 

ನಂತರ ಆಪ್ತ ಸಮಾಲೋಚಕರು ಪತಿ-ಪತ್ನಿ ಮತ್ತು ಪ್ರೇಮಿಯ ಜತೆ ಕುಳಿತು ಮಾತುಕತೆ ನಡೆಸಿದ್ದಾರೆ. ಆದರೆ ಕೋಮಲ್‌ ತಾವು ಪಿಂಟುವನ್ನು ಬಿಟ್ಟು ಬದುಕುವುದು ಸಾಧ್ಯವಿಲ್ಲ ಎಂದು ಅಂತಿಮ ನಿರ್ಧಾರ ಹೇಳಿದ್ದರಿಂದ ಪತಿ ಪಂಕಜ್‌ ಮರುಮಾತನಾಡದೇ ಅವರಿಬ್ಬರ ಮದುವೆಯನ್ನು ಖುದ್ದು ನಿಂತು ನೆರವೇರಿಸಿದ್ದಾರೆ.

 ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ‌. ಹಲವರು ಇಂಥಹ ಪತಿಯಂದಿರು ನಿಜ ಜೀವನದಲ್ಲಿಯೂ ಇರುತ್ತಾರೆಯೇ ಎಂದು ಅಚ್ಚರಿ ಪಟ್ಟಿದ್ದಾರೆ. ದೇವರಂಥಹ ಪತಿ ಎಂದರೆ ಇಂಥವರೇ ಇರಬೇಕು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಕೆಲವರು ಮಾತ್ರ ಆತ ಪತ್ನಿಗೆ ಬುದ್ಧಿ ಹೇಳಿ ಸರಿದಾರಿಗೆ ತರಬೇಕಿತ್ತು ಎಂದು  ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article