
Sadanand Malli demise- ಬಂಟ್ವಾಳ: ಹಿರಿಯ ರಾಜಕೀಯ ನಾಯಕ ಸದಾನಂದ ಮಲ್ಲಿ ನಿಧನ
11/03/2021 07:58:00 PM
ಬಂಟ್ವಾಳ: ಹಿರಿಯ ರಾಜಕೀಯ ನಾಯಕ ಸದಾನಂದ ಮಲ್ಲಿ ನಿಧನ
ಬಂಟ್ವಾಳದ ಹಿರಿಯ ಸಾಮಾಜಿಕ, ರಾಜಕೀಯ ನಾಯಕರಾದ ಸದಾನಂದ ಮಲ್ಲಿ ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ. ಅವರು ಅಲ್ಪ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು.
ಸದಾನಂದ ಮಲ್ಲಿ ಅವರು ಕಾರ್ಮಿಕ ನಾಯಕ ರಾಕೇಶ್ ಮಲ್ಲಿ ಅವರ ತೀರ್ಥರೂಪರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು, ಬಂಟ್ವಾಳ ನಗರಸಭೆಯ ಅಧ್ಯಕ್ಷರೂ ಆಗಿದ್ದ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದರು.
ಮೃತರ ನಿಧನಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ, ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ, ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ, ಜಿಲ್ಲಾ ಪಂಚಾಯತ್ ಸದಸ್ಯ ತುಂಬೆ ಚಂದ್ರಪ್ರಕಾಶ್ ಶೆಟ್ಟಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.