-->
ಡೇಟಿಂಗ್ ಮಾಡಲು ಸಣ್ಣವನೋ, ದೊಡ್ಡವನೋ ಮುಖ್ಯವಲ್ಲ ವ್ಯಕ್ತಿ ಮುಖ್ಯ: ನೆಟ್ಟಿಗರ ಬಾಯಿ ಮುಚ್ಚಿಸಿದ ರಶ್ಮಿಕಾ ಮಂದಣ್ಣ

ಡೇಟಿಂಗ್ ಮಾಡಲು ಸಣ್ಣವನೋ, ದೊಡ್ಡವನೋ ಮುಖ್ಯವಲ್ಲ ವ್ಯಕ್ತಿ ಮುಖ್ಯ: ನೆಟ್ಟಿಗರ ಬಾಯಿ ಮುಚ್ಚಿಸಿದ ರಶ್ಮಿಕಾ ಮಂದಣ್ಣ

ಬೆಂಗಳೂರು: ಕೊಡಗಿನ‌ ಬೆಡಗಿ ರಶ್ಮಿಕಾ ಮಂದಣ್ಣ ನಟ ರಕ್ಷಿತ್ ಶೆಟ್ಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಬ್ರೇಕ್‌ ಅಪ್‌ ಮಾಡಿಕೊಂಡು ರಕ್ಷಿತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಆ ಬಳಿಕ ಅದರಿಂದ ಹೊರಬರಲು ಸಾಕಷ್ಟು ಹೆಣಗಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಿಪ್ಪ ನಟಿ ರಶ್ಮಿಕಾ ಮಂದಣ್ಣ ಇದೀಗ ಡೇಟಿಂಗ್‌ ಬಗ್ಗೆ ಮಾತನಾಡಿ ಸುದ್ದಿಯಲ್ಲಿದ್ದಾರೆ. ಸದಾ ಒಂದಿಲ್ಲೊಂದು ವಿಚಾರಗಳಲ್ಲಿ ಸುದ್ದಿಯಲ್ಲೇ ಇರುವ ರಶ್ಮಿಕಾ ಇದೀಗ ಡೇಟಿಂಗ್‌ ಕುರಿತಂತೆ ಮಾತನಾಡಿದ್ದು, ಇದು ಅಭಿಮಾನಿಗಳನ್ನು ಕುತೂಹಲ ಕೆರಳಿಸುವಂತೆ. ಕಾಲಿವುಡ್, ಮಾಲಿವುಡ್ ಸೇರಿದಂತೆ ಬಾಲಿವುಡ್ ನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳನ್ನು ಬಾಚಿಕೊಂಡು ಸದಾ ಬ್ಯುಸಿ ಇರುವ ರಶ್ಮಿಕಾ, ಈ ನಡುವೆಯೂ ಕೆಲವೊಂದು ಖಾಸಗಿ ವಿಚಾರಗಳಿಗೆ ಸಂಬಂಧಿಸಿದಂತೆ ಸುದ್ದಿಯಲ್ಲಿ ಇರುತ್ತಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲೂ ಅವರು ಸದಾ ಸಕ್ರಿಯರಾಗಿರುತ್ತಿದ್ದಾರೆ.ರಶ್ಮಿಕಾ ಖಾಸಗಿ ವಿಚಾರಗಳನ್ನು ಕೆದಕುವುದೆಂದರೆ ಕೆಲವರಿಗೆ ಭಾರೀ ಆಸಕ್ತಿ. ಅದೇ ರೀತಿ ನೆಟ್ಟಿಗರು ಕೇಳಿರುವ ಪ್ರಶ್ನೆಗಳಿಗೆ ಚಟಪಟ ಎಂದು ಉತ್ತರಿಸುತ್ತಾ ಕೇಳುಗರ ಬಾಯನ್ನು ಮುಚ್ಚಿಸುವಲ್ಲಿ ರಶ್ಮಿಕಾ ಕೂಡಾ ನಿಸ್ಸೀಮರು. ಇದೀಗ ಅವರ ಡೇಟಿಂಗ್‌ ವಿಚಾರಕ್ಕೆ ಬರುವುದಾದರೆ, ‘ನಿಮಗಿನ್ನೂ 25 ವರ್ಷ ವಯಸ್ಸು. ನಿಮಗಿಂತ ಚಿಕ್ಕ ವಯೋಮಾನದ ಹುಡುಗನೊಂದಿಗೆ ಡೇಟಿಂಗ್​ ಮಾಡುವ ಅವಕಾಶ ಸಿಕ್ಕರೆ ಏನು ಮಾಡ್ತೀರೆಂದು' ನೆಟ್ಟಿಗನೊಬ್ಬ ಪ್ರಶ್ನೆ ಹಾಕಿದ್ದಾನೆ. ಆದರೆ ಅದಕ್ಕೆ ರಶ್ಮಿಕಾ ಮುಂದೆ ನೋಡದ ನೇರವಾಗಿ ಉತ್ತರ ನೀಡುತ್ತಾ 'ಅದರಲ್ಲೇನಿದೆ? ಡೇಟಿಂಗ್‌ಗೆ ವಯಸ್ಸು ಮುಖ್ಯವಾಗೋದಿಲ್ಲ, ವ್ಯಕ್ತಿ ಮುಖ್ಯವಾಗುತ್ತಾರೆ ಅಷ್ಟೇ. ನನಗೆ ಒಬ್ಬ ಹುಡುಗ ಇಷ್ಟವಾದರೆ ಅವನು ನನಗಿಂತ ಸಣ್ಣವನೋ ದೊಡ್ಡವನೋ ಅನ್ನುವುದೆಲ್ಲ ಮ್ಯಾಟರ್ ಆಗುವುದಿಲ್ಲ.


ಆ ಹುಡುಗ ಜೊತೆಗಿದ್ರೆ ನನಗೆ ನನ್ನ ಬಗ್ಗೆ ಒಳ್ಳೆಯ ಫೀಲ್ ಬರಬೇಕು. ಅವರು ನನ್ನನ್ನು ಬದಲಾಯಿಸಲು ಪ್ರಯತ್ನಿಸಬಾರದು. ಇರುವ ಹಾಗೇ ಒಪ್ಪಿಕೊಳ್ಳಬೇಕು. ಇಂಥ ಸಣ್ಣ ಸಣ್ಣ ವಿಷಯಗಳೇ ನನಗೆ ಮಹತ್ವದ್ದು ಅನಿಸುತ್ತೆ. ಅದು ಬಿಟ್ಟ ಈ ವಯಸ್ಸು, ದೊಡ್ಡವನಾ, ಸಣ್ಣವನಾ ಅನ್ನೋದೆಲ್ಲ ದೊಡ್ಡ ವಿಷಯ ಆಗುವುದಿಲ್ಲ’ ಎಂದು ಹೇಳಿ ಕೇಳುಗರ ಬಾಯನ್ನು ಮುಚ್ಚಿಸಿದ್ದಾರೆ. ಇವರ ಮಾತಿಗೆ ಹಲವರು ಶಹಭಾಸ್‌ಗಿರಿ ಹೇಳಿದ್ದಾರೆ‌. ಇನ್ನು ಕೆಲವರು ಯಾರಾದರೂ ಚಿಕ್ಕ ವಯಸ್ಸಿನ ಹುಡುಗನೊಂದಿಗೆ  ಡೇಟಿಂಗ್‌ ಆರಂಭಿಸಿದ್ದೀರಾ ಎಂಬ ನೇರಾನೇರ ಪ್ರಶ್ನೆಯನ್ನು ರಶ್ಮಿಕಾಗೆ ಕೇಳಿದ್ದಾರೆ.

Ads on article

Advertise in articles 1

advertising articles 2

Advertise under the article