-->
ಚಲಿಸುತ್ತಿದ್ದ ಕಾರಿನೊಳಗೆ ಯುವತಿಯ ಮೇಲೆ ಕಾಮುಕನ ಅಟ್ಟಹಾಸ: ಪ್ರಮುಖ ಆರೋಪಿ ಪೊಲೀಸ್ ಬಲೆಗೆ

ಚಲಿಸುತ್ತಿದ್ದ ಕಾರಿನೊಳಗೆ ಯುವತಿಯ ಮೇಲೆ ಕಾಮುಕನ ಅಟ್ಟಹಾಸ: ಪ್ರಮುಖ ಆರೋಪಿ ಪೊಲೀಸ್ ಬಲೆಗೆ

ಮಥುರಾ: ಚಲಿಸುತ್ತಿದ್ದ ಕಾರಿನಲ್ಲಿಯೇ ಕಾಮುಕನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಎಂದು ಮಥುರಾ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಬರೆಯಲು ಸಂತ್ರಸ್ತ ಯುವತಿ ಆಗ್ರಾಕ್ಕೆ ಆರೋಪಿಯೊಂದಿಗೆ ತೆರಳಿದ್ದಾಳೆ. ಆಗ್ರಾದಿಂದ ವಾಪಸ್ ಬರುತ್ತಿದ್ದ ಸಂದರ್ಭ ಕಾರಿನೊಳಗೆ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪೊಲೀಸರ ಪ್ರಕಾರ ಆರೋಪಿ ತೇಜ್ ವೀರ್ ಸಂತ್ರಸ್ತೆಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಪರಿಚಿತನಾಗಿ ಆಕೆಯ ವಿಶ್ವಾಸವನ್ನು ಗಳಿಸಿದ್ದನು. ಪ್ರಮುಖ ಆರೋಪಿ ತೇಜ್‌ವೀರ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಆತನ ಸಹಚರ ಕೃತ್ಯ ಎಸಗಲು ಸಹಕರಿಸಿರುವ ಮತ್ತೋರ್ವ ಆರೋಪಿ ದಿಗಂಬರ್ ತಲೆ ಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶ್ರೀಶ್ ಚಂದ್ರ ತಿಳಿಸಿದ್ದಾರೆ.

ಆರೋಪಿಗಳಿಬ್ಬರು 22-25 ವಯಸ್ಸಿನ ಆಸುಪಾಸಿನವರಾಗಿದ್ದಾರೆ‌. ಕೃತ್ಯ ಎಸಗಿದ ಬಳಿಕ ಆರೋಪಿ ಯುವತಿಯನ್ನು ಮಥುರಾದ ಕೋಸಿ ಕಲಾನ್ ಪ್ರದೇಶದ ಹೊರವಲಯದಲ್ಲಿ ಬಿಟ್ಟುಹೋಗಿದ್ದಾನೆ. ಆರೋಪಿಗಳಿಬ್ಬರೂ ಹರ್ಯಾಣದ ಪಲ್ವಾಲ್‌ನ ಮನ್‌ಪುರ್ ಗ್ರಾಮದವರಾಗಿದ್ದು, ದಿಗಂಬರ್ ನನ್ನು ಬಂಧಿಸಲು ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು.  

ಯುವತಿಯ ಸಹೋದರ ಸಲ್ಲಿಸಿರುವ ದೂರಿನ ಅನ್ವಯ ಯುವತಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು ಹಾಗೂ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 161 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಬಳಸಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. 

Ads on article

Advertise in articles 1

advertising articles 2

Advertise under the article