-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪ್ರದಕ್ಷಿಣೆ ಹಾಕಿ ಮರೆಯಾದ ನಾಟಿಕೋಳಿ: ಅಚ್ಚರಿಯಾದರೂ ಸತ್ಯ ಘಟನೆ

ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪ್ರದಕ್ಷಿಣೆ ಹಾಕಿ ಮರೆಯಾದ ನಾಟಿಕೋಳಿ: ಅಚ್ಚರಿಯಾದರೂ ಸತ್ಯ ಘಟನೆ

ಬೆಂಗಳೂರು: ದೊಡ್ಮನೆ ಹುಡುಗ ಪುನೀತ್‌ ರಾಜ್‌ಕುಮಾರ್‌ ಈ ಲೋಕವನ್ನು ಅಗಲಿ 20 ದಿನಗಳು ಕಳೆದುಹೋದವು. ಬದುಕಿದ್ದಾಗ ಅವರು ಎಲ್ಲರೊಂದಿಗೆ ನಡೆದುಕೊಂಡ ರೀತಿ, ಆದರ್ಶಗಳು, ಅವರೊಂದಿಗಿನ ಒಡನಾಟದ ಕುರಿತಾಗಿ ಇನ್ನೂ ಅವರ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. 

ಇದೇ ಪುಣ್ಮಸ್ಮರಣೆಯೊಂದಿಗೆ ನಿನ್ನೆ ’ಪುನೀತ ನಮನ’ ಕಾರ್ಯಕ್ರಮವೂ ನಡೆದಿದೆ. ಇದೇ ವೇಳೆ ಅಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಾಟಿ ಕೋಳಿ ಸಾಂಬಾರು ಬಹಳ ಪ್ರೀತಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ತೀರಾ ಅಚ್ಚರಿಯ ವಿಚಾರವೆಂದರೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವ ಅವರ ಸಮಾಧಿ ಬಳಿ ಬಂದ ನಾಟಿ ಕೋಳಿಯೊಂದು ಸಮಾಧಿ ಮುಂದೆ ಕುಳಿತು ಕೊನೆಗೆ ಅದಕ್ಕೆ ಪ್ರದಕ್ಷಿಣೆ ಹಾಕಿ ಹೋಗಿದೆ. ಇದನ್ನು ಕಂಡು ಅಭಿಮಾನಿಗಳು ಆಶ್ಚರ್ಯಪಟ್ಟುಕೊಂಡಿದ್ದಾರೆ. 

ಅಪ್ಪುವಿಗೆ ಹಿರಿಯರು, ಕಿರಿಯರು ಹಾಗೂ ಪುಟ್ಟ ಪುಟ್ಟ ಪುಟಾಣಿಗಳು ಕೂಡ ಅಭಿಮಾನಿಗಳೇ. ತಮ್ಮ ನೆಚ್ಚಿನ ಅಪ್ಪು ಇನ್ನಿಲ್ಲ ಎಂದು ತಿಳಿದಾಗ ಕಣ್ಣೀರು ಸುರಿಸಿದ ಮಕ್ಕಳು ಅದೆಷ್ಟೋ ಮಂದಿ. ಪುನೀತ್‌ ಅವರ ಅಂತಿಮ ದರ್ಶನಕ್ಕೆ ಬಂದವರಲ್ಲಿ ಮಕ್ಕಳು ಕೂಡ ಅಧಿಕ ಮಂದಿ ಇದ್ದರು. ಆದರೆ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿ‍-ಪಕ್ಷಿಗಳು ಕೂಡ ಅಪ್ಪು ಅವರನ್ನು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಆದರೂ ಈ ಕೋಳಿ ಎಲ್ಲಿಂದ ಬಂತು, ನಂತರ ಎಲ್ಲಿಗೆ ಹೋಯ್ತು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ!

Ads on article

Advertise in articles 1

advertising articles 2

Advertise under the article