-->
ಸ್ನಾನಕ್ಕೆ ಹೋದ ಪತಿಗೆ ಪತ್ನಿ ಟವಲ್ ಕೊಡುವುದು ತಡವಾಯಿತೆಂದು ನಡೆಯಿತು ದುರಂತ!

ಸ್ನಾನಕ್ಕೆ ಹೋದ ಪತಿಗೆ ಪತ್ನಿ ಟವಲ್ ಕೊಡುವುದು ತಡವಾಯಿತೆಂದು ನಡೆಯಿತು ದುರಂತ!

ಬಾಲಘಾಟ್‌ (ಮಧ್ಯಪ್ರದೇಶ): ಸ್ನಾನಕ್ಕೆ ಹೋದ ಸಂದರ್ಭ ಟವಲ್‌ ಕೊಡಲು ಪತ್ನಿ ತಡ ಮಾಡಿದಲೆಂದು ಪತಿಯೋರ್ವ ಆಕೆಯನ್ನು ರಾಡ್ ನಿಂದ ಹೊಡೆದು ಬರ್ಬರ ಹತ್ಯೆಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರದಲ್ಲಿ ನಡೆದಿದೆ.

ಬಾಲಘಾಟ್ ಜಿಲ್ಲೆಯ ಕಿರ್ನಾಪುರದ ರಾಜಕುಮಾರ್ ಬಹೆಯ (50) ಆರೋಪಿ. ಈತನ ಪತ್ನಿ ಪುಷ್ಪಾಬಾಯಿ(45) ಬಲಿಯಾದ ಮಹಿಳೆ.

ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ರಾಜಕುಮಾರ್‌ ಸ್ನಾನಕ್ಕೆ ಹೋಗಿದ್ದಾನೆ. ಆಗ ಪತ್ನಿಯಲ್ಲಿ ಟವಲ್‌ ಕೊಡುವಂತೆ ಕೇಳಿದ್ದಾನೆ. ಆದರೆ ಆಕೆ ಅಡುಗೆ ಕೆಲಸದಲ್ಲಿ ಇದ್ದುದ್ದರಿಂದ ಕೆಲಸ ಮುಗಿಸಿದ ಬಳಿಕ ಕೊಡುವೆ ಎಂದಿದ್ದಾಳೆ. ಆದರೆ ಇತ್ತ ಬಾತ್‌ರೂಮ್‌ನಲ್ಲಿ ಪತಿ ಟವಲ್ ಗಾಗಿ ಕಾದಿದ್ದಾನೆ. 

ಆದರೆ ರಾಜಕುಮಾರ್ ಬಹೆಯ‌ ಸ್ನಾನ ಮುಗಿದರೂ ಪತ್ನಿ ಟವಲ್‌ ಕೊಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಆತ ಬಾತ್‌ರೂಮ್‌ನಿಂದ ಹೊರ ಬಂದವನೇ ಅಲ್ಲಿಯೇ ಇದ್ದ ಕಬ್ಬಿಣದ ರಾಡ್‌ನಿಂದ ಅಡುಗೆ ಮಾಡುತ್ತಿದ್ದ ಪತ್ನಿಯ ತಲೆಗೆ, ಇತರೆಡೆ ಸರಿಯಾಗಿ ಹೊಡೆದಿದ್ದಾನೆ. ಅಲ್ಲಿಯೇ ಇದ್ದ ಮಗಳು ತಡೆಯಲು ಹೋದರೂ ಆಕೆಯನ್ನು ದೂಡಿ ಪತ್ನಿಗೆ ಹೊಡೆದದ್ದಾನೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. 

ಇದೀಗ ಆರೋಪಿ‌ ಪತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

Ads on article

Advertise in articles 1

advertising articles 2

Advertise under the article