ಇನ್ನು ಪ್ರತಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ಹೆಸರು ಇರಲ್ಲ... ಮತ್ತೆ ಏನು ಇರುತ್ತೆ? ಇಲ್ಲಿ ನೋಡಿ


ಬೆಂಗಳೂರು; ರಾಜ್ಯದ ಪ್ರತಿ ತಾಲೂಕಿನಲ್ಲಿ ತಾಲೂಕು ಕಚೇರಿಯಾಗಿ ಇರುವ ಮಿನಿ ವಿಧಾನಸೌಧದ ಹೆಸರು ಬದಲಾಯಿಸಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಆಡಳಿತ ಕಚೇರಿಗಳನ್ನು 'ಮಿನಿ ವಿಧಾನಸೌಧ' ಬದಲು 'ತಾಲ್ಲೂಕು ಆಡಳಿತ ಸೌಧ' ಎಂದು ನಾಮಾಂಕಿತಗೊಳಿಸಲು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮಿನಿ ವಿಧಾನಸೌಧ ಹೆಸರಿನಲ್ಲಿ ಇರುವ ಮಿನಿ ಎಂಬ ಪದ ಇಂಗ್ಲಿಷ್ ಭಾಷೆಯಾಗಿರುವುದರಿಂದ ಕನ್ನಡದಲ್ಲಿ ತಾಲ್ಲೂಕು ಕಚೇರಿ ಇರಬೇಕೆಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನೂ ಮುಂದೆ ಮಿನಿ‌ವಿಧಾನಸೌಧ ತಾಲೂಕು ಆಡಳಿತ ಸೌಧ ವಾಗಿ ನಾಮಕರಣವಾಗಲಿದೆ.