-->

ಸೊಂಟದ ಸುತ್ತಳತೆ, ಬ್ರಾ ಸೈಝ್ ಇಂತಿಷ್ಟಿರುವ ಯುವತಿಯಿದ್ದಲ್ಲಿ ಮದುವೆಗೆ ಸಿದ್ಧ ಎಂದ ಭೂಪ: ಈತನ ಬೇಡಿಕೆಯ ಮಾರುದ್ದದ ಪಟ್ಟಿಗೆ ನೆಟ್ಟಿಗರು ವ್ಯಂಗ್ಯ

ಸೊಂಟದ ಸುತ್ತಳತೆ, ಬ್ರಾ ಸೈಝ್ ಇಂತಿಷ್ಟಿರುವ ಯುವತಿಯಿದ್ದಲ್ಲಿ ಮದುವೆಗೆ ಸಿದ್ಧ ಎಂದ ಭೂಪ: ಈತನ ಬೇಡಿಕೆಯ ಮಾರುದ್ದದ ಪಟ್ಟಿಗೆ ನೆಟ್ಟಿಗರು ವ್ಯಂಗ್ಯ

ಹೊಸದಿಲ್ಲಿ: ಜೀವನ ಸಂಗಾತಿಗಳ ಬಗ್ಗೆ ಅವರವರಿಗೆ ಅವರದ್ದೇ ಆದ ಅಭಿಪ್ರಾಯಗಳು ಇರುತ್ತವೆ. ತಮಗೆ ಇಂತಹದ್ದೇ ಹುಡುಗ ಬೇಕು, ಇಂತಹದ್ದೇ ಹುಡುಗಿ ಬೇಕು ಎನ್ನುವ ಬೇಡಿಕೆಗಳು ಇರುತ್ತವೆ‌. ಆದರೆ ಕೆಲವರ ಬೇಡಿಕೆಗಳು ಅತಿರೇಕವಾಗಿರುತ್ತದೆ. 

ಮ್ಯಾಟ್ರಿಮೋನಿಗಳಲ್ಲಿ ಹಾಕಿರುವ ಜಾಹಿರಾತುಗಳಲ್ಲಿ ‘ನೋಡಲು ಸುಂದರರಬೇಕು’, ‘ಎತ್ತರ ಇಂತಿಷ್ಟಿರಬೇಕು’, ‘ಪದವಿಧರರಾಗಿರಬೇಕು’, ’ಇಂತಿಷ್ಟು ವರ್ಷದವರಾಗಿರಬೇಕು’, ಈ ರೀತಿ ಬೇಡಿಕೆಗಳು ಸಾಮಾನ್ಯವಾಗಿರುತ್ತದೆ. ಆದರೆ ಇಲ್ಲೊಬ್ಬ ಭೂಪ ತಾನು ಮದುವೆಯಾಗುವ ಹುಡುಗಿಯ ಬ್ರಾ ಸೈಜ್, ಸೊಂಟದ ಸುತ್ತಳತೆ, ಆಕೆಯ ಉಡುಪು ಸೇರಿ ಇನ್ನಿತರ ಪಟ್ಟಿಯನ್ನು ನೀಡಿ ವೆಬ್‌ಸೈಟ್‌ನ ಕೆಂಗಣ್ಣಿಗೆ ಗುರಿಯಾಗಿದ್ದಾನೆ. 

ಈತನ ಬೇಡಿಕೆಯನ್ನು ನೋಡಿರುವ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ಈತ ತನ್ನನ್ನು ಮದುವೆಯಾಗುವವಳು 5.2 ಅಡಿಯಿಂದ 5.6 ಎತ್ತರವಿರಬೇಕು, 47-52 ಕೆಜಿ ತೂಕ ಇರಬೇಕು, ಸೊಂಟದ ಸುತ್ತಳತೆ 12-16 ಇಂಚು ಸಾಕು, ಬ್ರಾ ಗಾತ್ರ 32b ರಿಂದ 32c ಇರಬೇಕು, ಪಾದಗಳು 6-7 ಇಂಚು ಉದ್ದ ಇರಬೇಕು’ ಎಂದು ‘ಬೆಟರ್‌ಹಾಫ್‌.ಎಐ’ ಎಂಬ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನ ತನ್ನ ಪ್ರೊಫೈಲ್‌ನ ‘ಬಯೋ’ ವಿಭಾಗದಲ್ಲಿ ಬೇಡಿಕೆ ಇರಿಸಿದ್ದಾನೆ.

ಅಲ್ಲದೆ, ಆಕೆಯ ವಯಸ್ಸು 18-26 ಒಳಗಿರಬೇಕು, ನಾಯಿಯನ್ನು ಪ್ರೀತಿಸುವ, ಮಕ್ಕಳನ್ನು ಇಷ್ಟಪಡದ, ಪ್ರವಾಸ ಪ್ರಿಯೆ ಆಗಿರಬೇಕು. 2ಎ ಕೆಟಗರಿಯವಳು, ಕುಟುಂಬಸ್ಥರು ಹಾಗೂ ಸಮಾಜದಲ್ಲಿ ಬೆರೆಯುವ ಮನಸ್ಥಿತಿ ಹೊಂದಿದವಳು, ಹಾಸ್ಯ ಮನೋಭಾವ ಇದ್ದು, ಮೆನಿಕ್ಯೂರ್‌/ ಪೆಡಿಕ್ಯೂರ್‌ ಮಾಡಿಸಿಕೊಳ್ಳುವ, ಸ್ವಚ್ಛತೆ ಕಾಪಾಡಿಕೊಳ್ಳುವವಳು ಆಗಿರಬೇಕು. ಸಿನಿಮಾ ವೀಕ್ಷಣೆ, ಸಭ್ಯ ಬಟ್ಟೆ ಧರಿಸುವವಳು, ಜತೆಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಇರುವವಳು ಆದರೆ ಮದುವೆಗೆ ಸಿದ್ಧ’ ಎಂದು ಮಾರುದ್ದದ ಪಟ್ಟಿಯನ್ನು ಜಾಹಿರಾತು ವೇದಿಕೆಯಲ್ಲಿ ಬರೆದುಕೊಂಡಿದ್ದಾನೆ.

ಸದ್ಯ ಈತನ ಹಲವು ಬೇಡಿಕೆಗಳ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇತ್ತ ‘ವೈಯುಕ್ತಿಕ’ ವಿಚಾರಗಳ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಇದು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನ ನಿಯಮಗಳ ಉಲ್ಲಂಘನೆಯಾಗಿದ್ದು, ‘ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಂಸ್ಥೆ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article