-->
Mangaluru: ಯುವತಿಗೆ ತಮಾಷೆ ಮಾಡಿದರೆಂದು ಇತ್ತಂಡಗಳ ಮಧ್ಯೆ ಹೊಡೆದಾಟ: ಪೊಲೀಸ್ ಬಂದಾಗ ಒಂದು ತಂಡ ಪರಾರಿ

Mangaluru: ಯುವತಿಗೆ ತಮಾಷೆ ಮಾಡಿದರೆಂದು ಇತ್ತಂಡಗಳ ಮಧ್ಯೆ ಹೊಡೆದಾಟ: ಪೊಲೀಸ್ ಬಂದಾಗ ಒಂದು ತಂಡ ಪರಾರಿ

ಮಂಗಳೂರು: ಯುವತಿಗೆ ತಮಾಷೆ ಮಾಡಿದ್ದರೆಂದ ಆರೋಪದ ಹಿನ್ನೆಲೆಯಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಟ ನಡೆದ ಘಟನೆ ನಗರದ ಕದ್ರಿ ಬಟ್ಟಗುಡ್ಡೆ ಬಳಿ ಬುಧವಾರ ಸಂಜೆ ನಡೆದಿದೆ.

ಕದ್ರಿಯ ಬಟ್ಟಗುಡ್ಡೆಯ ರೆಸ್ಟೋರೆಂಟ್‌ವೊಂದಕ್ಕೆ ಯುವತಿ,- ಯುವಕ ಜೋಡಿಯೊಂದು ಬಂದಿತ್ತು. ಈ ಸಂದರ್ಭ ಅಲ್ಲಿದ್ದ ಯುವಕರ ತಂಡವೊಂದು ಯುವತಿಗೆ ತಮಾಷೆ ಮಾಡಿದ್ದರೆಂದು ನೆಪವೊಡ್ಡಿ ಯುವತಿ ಜೊತೆಗಿದ್ದ ಯುವಕ ಅವರೊಂದಿಗೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ವಾಗ್ವಾದ ಬೆಳೆದಿದೆ. 

ತಕ್ಷಣ ಯುವತಿ ಜೊತೆಗಿದ್ದಾತ ಫೋನ್ ಕರೆ ಮಾಡಿ ತನ್ನ ಗೆಳೆಯರನ್ನು ಕರೆಸಿದ್ದಾನೆ. ಪರಿಣಾಮ ಇನ್ನಷ್ಟು ಯುವಕರು ಜಮಾಯಿಸಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭ ಕಲ್ಲಿನಿಂದ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಯುವಕನೊಬ್ಬನ ಹಣೆಗೆ ಗಾಯವಾಗಿದೆ. 

ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರನ್ನು ನೋಡಿದ ಯುವಕರ ಒಂದು ತಂಡ ಸ್ಥಳದಿಂದ ಪರಾರಿಯಾಗಿದೆ. ಬಳಿಕ ಪೊಲೀಸರು ಯುವತಿಯನ್ನು ವಿಚಾರಿಸಿ ಕಳುಹಿಸಿಕೊಟ್ಟಿದ್ದಾರೆ.   

Ads on article

Advertise in articles 1

advertising articles 2

Advertise under the article