MANGALORE: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ಧಂಧೆ- ಸುರತ್ಕಲ್ ಕಾಟಿಪಳ್ಳದ ಮಹಿಳೆ ಸಹಿತ ಇಬ್ಬರ ಅರೆಸ್ಟ್

 



 

ಮಂಗಳೂರು:  ಮಂಗಳೂರಿನ ಕಾವೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ದಲ್ಲಾಳಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 

ವೇಶ್ಯಾವಾಟಿಕೆ ನಡೆಸುತ್ತಿದ್ದ ದಲ್ಲಾಳಿಗಳಲ್ಲಿ ಓರ್ವ ಮಹಿಳೆಯಾಗಿದ್ದಾಳೆ. ರಮ್ಲಾತ್ (46) ಎಂಬ  ಈಕೆ ಮೂಲತ ಬಜ್ಪೆಯವಳಾಗಿದ್ದು ಇದೀಗ ಸುರತ್ಕಲ್ ನ ಕಾಟಿಪಳ್ಳ ಕೃಷ್ಣಾಪುರದಲ್ಲಿ ವಾಸವಾಗಿದ್ದಾಳೆ.    ಬಂಧಿತನಾದ ಮತ್ತೋರ್ವ ಉಳಿಯಾರಗೋಳಿ ಅಬ್ದುಲ್ ಅಸೀಫ್ (55) ಎಂಬಾತನಾಗಿದ್ದಾನೆ.




 

ರಮ್ಲಾತ್ ಮತ್ತು ಆಸೀಫ್ ಎಂಬಿಬ್ಬರು ಕಾವೂರುನಲ್ಲಿ ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು ಮೊದಲಾದೆಡೆಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆಗಳಲ್ಲಿ ತೊಡಗಿಸುತ್ತಿದ್ದರು.

 

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ವೇಶ್ಯಾವಾಟಿಕೆಗೆ ಕರೆತಂದಿದ್ದ ಯುವತಿಯೊಬ್ಬಳು ಪತ್ತೆಯಾಗಿದ್ದು ಈಕೆಯನ್ನು ರಕ್ಷಿಸಲಾಗಿದೆ.  ಬಂಧಿತರಿಂದ ರೂ 10060, ಮೂರು ಮೊಬೈಲ್ ಪೋನ್ ಮತ್ತು ಒಂದು ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ