Mangalore-ಮದುವೆ ನಿಗದಿಯಾದ ಬಳಿಕ ಈತ ಆ ಯುವತಿಗೆ ಕಳುಹಿಸಿದ ಅಶ್ಲೀಲ ಸಂದೇಶ- ನಿಶ್ಚಿತಾರ್ಥ ಮೊದಲೆ ಬಾಲ ಬಿಚ್ಚಿದ ಯುವಕ ಅಂದರ್!




 ಮಂಗಳೂರು : ತನ್ನ ಜತೆಗೆ ಮದುವೆ ನಿಗದಿಯಾಗಿದ್ದ ಯುವತಿಗೆ ಮದುವೆಯಾಗಬೇಕಿದ್ದ ಯುವಕ ಅಶ್ಲೀಲ , ವಿಚಿತ್ರ ಸಂದೇಶ ಕಳುಹಿಸಿ ಜೈಲುಪಾಲಾಗಿದ್ದಾನೆ.



 ನೊಂದ ಯುವತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿ  ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ ( 35 ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ ಭಟ್ ಗೆ  ನಗರದ ಯುವತಿಯೊಬ್ಬಳ ಜತೆ ವಿವಾಹ ಮಾತುಕತೆ ನಡೆದಿತ್ತು . 2 ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ ಬಳಿಕ  ಯುವಕ ಮದುವೆ ಯಾಗಲಿದ್ದಯುವತಿಯ ಮೊಬೈಲ್ ನಂಬರ್ ಪಡೆದು ವಾಟ್ಸಪ್ ಚಾಟಿಂಗ್ ಆರಂಭಿಸಿದ್ದ . 

ದಿನಕಳೆದಂತೆ ಯುವತಿ ಜತೆ ಸಲುಗೆಯಿಂದ ಮಾತನಾಡಿದ ಶ್ರೀನಿವಾಸ್ ಅಶ್ಲೀಲ , ವಿಚಿತ್ರ ಸಂದೇಶ ಗಳನ್ನು ಕಳುಹಿಸಲು ಆರಂಭಿಸಿದ. ಈ ವಿಚಾರವನ್ನು ಯುವತಿ ಮನೆಯವರ ಗಮನಕ್ಕೆ ತಂದ ಕಾರಣ ಯುವತಿ  ಕುಟುಂಬಸ್ಥರು ನಿಶ್ಚಿತಾರ್ಥವನ್ನು ಬೇರೆ ಕಾರಣ ನೀಡಿ ಮುಂದೂಡಿದ್ದರು . 

ಈ ನಡುವೆ ಯುವಕ ಸಲಿಂಗ ಕಾಮಕ್ಕೆ ಸಂಬಂಧಿಸಿದ ಅಶ್ಲೀಲ ಸಂದೇಶಗಳನ್ನು ಯುವತಿಗೆ ಕಳುಹಿಸಿದ್ದ . ಇದರಿಂದ ನೊಂದ ಯುವತಿ ಸೆ .15 ರಂದು  ಮಂಗಳೂರಿನ ಸೈಬರ್ ಠಾಣೆಗೆ ಯುವಕನ ವಿರುದ್ಧ ಮಾನಸಿಕ ಕಿರುಕುಳ ನೀಡು ತ್ತಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ಶ್ರೀನಿವಾಸ ಭಟ್ ನನ್ನು ಬಂಧಿಸಿದರು.
BREAKING NEWS
Loading latest news...
Join our WhatsApp Channel Powered By : Online Pudu