
ಮಂಗಳೂರು: ಹಳ್ಳದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋಗಿ ವ್ಯಕ್ತಿ ಮೃತ್ಯು
11/09/2021 03:41:00 AM
ಬೆಳ್ತಂಗಡಿ: ಹಳ್ಳ ದಾಟುವ ವೇಳೆ ಆಕಸ್ಮಿಕವಾಗಿ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಘಟನೆ ಮಲವಂತಿಗೆಯಲ್ಲಿ ನಡೆದಿದೆ.
ಹಿರಿಮಾರು ನಿವಾಸಿ ಗಣೇಶ್ (40) ಎಂಬವರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟವರು.
ಗಣೇಶ್ ತಮ್ಮ ತೋಟದಲ್ಲಿ ಅಡಿಕೆ ಹೆಕ್ಕಲು ಹೋಗಿ ಮರಳುತ್ತಿದ್ದ ವೇಳೆ ಮಲ್ಲಕಜಕ್ಕೆ ಬಳಿ ಹಳ್ಳ ದಾಟುತ್ತಿದ್ದರು. ಈ ಸಂದರ್ಭ ಅವರು ಕಾಲುಜಾರಿ ರಭಸವಾಗಿ ಹರಿಯುವ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು.
ಮಾಹಿತಿ ತಿಳಿದು ಸ್ಥಳೀಯರು ಅವರ ಶೋಧ ನಡೆಸಿದ್ದಾರೆ. ಈ ಸಂದರ್ಭ ಅಲ್ಲಿಂದ ತುಸು ದೂರದ ಕಲ್ಲುಬಂಡೆಯ ಎಡೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.