-->
ಜೈಲಿನಲ್ಲಿರುವ ಪ್ರಿಯತಮನನ್ನೆ ಮದುವೆಯಾಗಲು ಹಠಕ್ಕೆ ಬಿದ್ದ ಪ್ರಿಯತಮೆ- ಪೋಷಕರಿಗೆ ಪೇಚಾಟ

ಜೈಲಿನಲ್ಲಿರುವ ಪ್ರಿಯತಮನನ್ನೆ ಮದುವೆಯಾಗಲು ಹಠಕ್ಕೆ ಬಿದ್ದ ಪ್ರಿಯತಮೆ- ಪೋಷಕರಿಗೆ ಪೇಚಾಟ


ಯಾದಗಿರಿ : ಪ್ರೀತಿಯ ಬಲೆಗೆ ಬಿದ್ದಿದ್ದ ಬಾಲಕಿಯೊಬ್ಬಳು ಇದೀಗ ಪ್ರೌಢ ವಯಸ್ಕಳಾಗಿದ್ದು , ಜೈಲಿನಲ್ಲಿರುವ ಪ್ರೇಮಿಯ ಬಿಡುಗಡೆಗಾಗಿ ಎದುರು ನೋಡುತ್ತಿರುವುದು ಮಾತ್ರ ವಲ್ಲದೇ ಆತನನ್ನೇ ಮದುವೆ ಆಗಲು ಪಟ್ಟು ಹಿಡಿದು ಕುಳಿತಿರುವುದು ಪಾಲಕರ ಪೇಚಾಟಕ್ಕೆ ಕಾರಣವಾಗಿದೆ.

 ಯುವತಿಯು ತನ್ನ   ಭಾವನೆಗಳನ್ನು ಕಿತ್ತು ಹಾಕಲು ಪಾಲಕರು ಹಿಂಸೆ ನೀಡುತ್ತಿದ್ದಾರೆ ಎಂದು ಪೊಲೀಸರ ಮೊರೆ ಹೋಗಿದ್ದಾಳೆ . 

ಇದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರಲಭಾವಿ ಯುವಕ  ಮತ್ತು ಮಾರನಾಳ ಗ್ರಾಮದ ಬಾಲಕಿಯ ಪ್ರೇಮ ಕತೆ . ಬಾಲಕಿಯನ್ನು ಪ್ರೀತಿಸಿದ್ದ ಯುವಕ ಜೆಸಿಬಿ ಆಪರೇಟರ್ ಆಗಿದ್ದು ಈ ಪ್ರೇಮಿಗಳು ಒಂದು ಬಾರಿ ಮನೆಬಿಟ್ಟು ಓಡಿ ಹೋಗಿದ್ದರು.ಕೊನೆಗೆ ಇವರನ್ನು ಪತ್ತೆ ಮಾಡಿ ಹುಡುಗಿ ಯನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು . ಬಾಲಕಿಯ ಮನೆಯ ಪಾಲಕರು ಯುವಕನ ಮೇಲೆ ಪೋಕ್ಸ್ ಕಾಯಿದೆ ಯಡಿ ಪ್ರಕರಣ ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದ್ದರು . 


ಯುವಕ 2019 ರಿಂದಲೂ ಜೈಲಿನಲ್ಲಿಯೇ ಇದ್ದು ಬಾಲಕಿಯನ್ನು ಕೂಡ ಬಾಲ ಮಂದಿರಕ್ಕೆ ಸೇರಿಸಲಾಗಿತ್ತು . ಆದರೆ ಆ ಯುವತಿ ಇದೀಗ ವಯಸ್ಕಳಾದ ಪರಿಣಾಮ ಇತ್ತೀಚೆಗೆ ಬಾಲ ಮಂದಿರದಿಂದ ಬಿಡುಗಡೆ ಮಾಡಲಾಗಿದೆ . 

ಬಾಲಮಂದಿರದಿಂದ ಬಿಡುಗಡೆಯಾಗಿರುವ ಆಕೆ ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದು ಕುಳಿತ್ತಿದ್ದಾಳೆ . ಆಕೆಯ ಕುಟುಂಬಸ್ಥರು ಪ್ರೀತಿಸಿದ ಯುವಕ ನೊಂದಿಗೆ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ .  ಇದೀಗ ಈ ಪ್ರಕರಣ ಪೊಲೀಸ್ ಠಾಣೆ  ಮೆಟ್ಟಿಲೇರಿದೆ.

Ads on article

Advertise in articles 1

advertising articles 2

Advertise under the article