-->
ಶಿಕ್ಷಣದ ಜೊತೆಗೆ ಆಟೋ ಓಡಿಸಿ ಕುಟುಂಬದ ಜವಾಬ್ದಾರಿ ಹೊತ್ತ ಸರಕಾರಿ ಕಾಲೇಜು ವಿದ್ಯಾರ್ಥಿನಿ: ಈಕೆಯ ಕಷ್ಟ ನೋಡಿದರೆ ಕಣ್ಣಂಚು ಒದ್ದೆಯಾಗುದಂತೂ ಗ್ಯಾರಂಟಿ

ಶಿಕ್ಷಣದ ಜೊತೆಗೆ ಆಟೋ ಓಡಿಸಿ ಕುಟುಂಬದ ಜವಾಬ್ದಾರಿ ಹೊತ್ತ ಸರಕಾರಿ ಕಾಲೇಜು ವಿದ್ಯಾರ್ಥಿನಿ: ಈಕೆಯ ಕಷ್ಟ ನೋಡಿದರೆ ಕಣ್ಣಂಚು ಒದ್ದೆಯಾಗುದಂತೂ ಗ್ಯಾರಂಟಿ

ನಲ್ಗೊಂಡ: ವಿದ್ಯಾರ್ಥಿ ಜೀವನದಲ್ಲಿ ಹೆಚ್ಚಿನವರು  ಪಾಲಕರನ್ನು ಅವಲಂಬಿಸಿರುತ್ತಾರೆ. ಕೆಲವರು ಮಾತ್ರ ಓದಿನ ಜೊತೆಜೊತೆಗೆ ಕುಟುಂಬದ ಬೆನ್ನೆಲುಬಾಗಿ ನಿಂತಿರುತ್ತಾರೆ. ಬಡತನದ ಕುಟುಂಬದಿಂದ ಬಂದಿರುವ ಬಹುತೇಕ ಯುವಕರು ಈ ರೀತಿಯಲ್ಲಿ ಕುಟುಂಬಕ್ಕೆ ಆಸರೆಯಾಗಿರುತ್ತಾರೆ. ಇದಕ್ಕೆ ಯುವತಿಯರು ಸಹ ಹೊರತಾಗಿರೋದಿಲ್ಲ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ.

ಈ ಯುವತಿ ಓದಿನೊಂದಿಗೆ ಆಟೋ ಚಾಲಕಿಯಾಗಿಯೂ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿದಿನ ಕಾಲೇಜಿಗೆ ತನ್ನ ಆಟೋವನ್ನು ತೆಗೆದುಕೊಂಡು ಹೋಗುವ ಈಕೆ ಓದಿನ ಜತೆಗೆ ಕುಟುಂಬದ ಬೆನ್ನಿಗೆ ನಿಂತಿದ್ದಾಳೆ. ಈಕೆಯ ಸ್ಟೋರಿ ಕೇಳಿದ್ರೆ ಕಣ್ಣಂಚು ಒದ್ದೆಯಾಗುವುದಂತೂ ತುಂಬಿಕೊಳ್ಳುವುದು ಗ್ಯಾರೆಂಟಿ. 

19 ವರ್ಷದ ಈ ಯುವತಿಯ ಹೆಸರು ಸಬಿತಾ. ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ಶಲಿಗೌರ್ರಮ್​ ವಲಯದ ವಾಂಗಮಾರ್ಥಿ ಗ್ರಾಮದ ನಿವಾಸಿ ಈತೆ. ಆರು ವರ್ಷಗಳ ಹಿಂದೆ ಈಕೆಯ ತಂದೆ ಇಹಲೋಕ ತ್ಯಜಿಸಿದ್ದಾರೆ. ಬಡಕುಟುಂಬದ ಆಧಾರಸ್ತಂಭದಂತಿದ್ದ ತಂದೆ ಮರಣ ಹೊಂದಿದ ಬಳಿಕ ಕುಟುಂಬದ ಎಲ್ಲ ಭಾರಗಳು ತಾಯಿಯ ಮೇಲೆ ಬಿತ್ತು. ಪ್ರತಿದಿನವೂ ತಾಯಿ ಪಡುತ್ತಿದ್ದ ಕಷ್ಟವನ್ನು ಕಂಡು ಸಬಿತಾ ಮನಸ್ಸು ಭಾರವಾಗಿತ್ತು. ಅದಕ್ಕಾಗಿ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ನಿರ್ಧಾರ ಮಾಡಿದ ಸಬಿತಾಳಿಗೆ ಓದು ಆಕೆಗೆ ಅಡ್ಡಿಯಾಗಿತ್ತು. ತನ್ನ ಗ್ರಾಮದ 21 ಕಿ.ಮೀ ದೂರದಲ್ಲಿರುವ ನಕಿರೆಕಲ್​ ಸರ್ಕಾರಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ. ಇದೀಗ ಓದಿನ ಜೊತೆಗೆ ಆಟೋ ಏರಿ ದುಡಿಯುವ ಕೆಲಸಕ್ಕೆ ಇಳಿದಿದ್ದಾಳೆ. 

ಬೆಳಗ್ಗಿನ ಹೊತ್ತು ಆಟೋ ಏರಿ ಸ್ವಲ್ಪ ಸಂಪಾದನೆ ಮಾಡುವ ಈಕೆ ಬಳಿಕ ಕಾಲೇಜಿಗೆ ಹೋಗುತ್ತಾಳೆ. ಮತ್ತೆ ಕಾಲೇಜಿನಿಂದ ಮನೆಗೆ ಬರುವಾಗಲೂ ಕೆಲಸ ಮಾಡುತ್ತಾಳೆ. ದಿನವೊಂದಕ್ಕೆ 200 ರಿಂದ 300 ರೂ. ದುಡಿಯುವ ಸಬಿತಾ ಭಾನುವಾರ 600 ರೂ. ಸಂಪಾದಿಸುತ್ತಾಳಂತೆ. ಈ ಮೂಲಕ ಮನೆಗೆ ಆಸರೆಯಾಗಿದ್ದಾಳೆ. 

ಸಬಿತಾ ತಂದೆ ನರಸಯ್ಯ ತಮ್ಮ ಗ್ರಾಮದ ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಮೃತಪಟ್ಟ ಬಳಿಕ ಅವರ ತಾಯಿ ಅದೇ ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಲುಹುತ್ತಿದ್ದರು. ಇನ್ನು ಸಬಿತಾ ಸಮಯ ಸಿಕ್ಕಾಗಲೆಲ್ಲ ಹೋಟೆಲ್​ ಮಾಲೀಕರ ಬಳಿ ಕಾರು ಓಡಿಸುವುದನ್ನು ಕಲಿಯುತ್ತಿದ್ದಾಳಂತೆ. ಆ ಮಾಲಕ ಕೂಡ ಅದಕ್ಕೆ ಬೆಂಬಲ ನೀಡುತ್ತಿದ್ದಾರೆ. ಸೆಕೆಂಡ್​ಹ್ಯಾಂಡ್​ ಆಟೋ ಖರೀದಿಸಿರುವ ಸಬಿತಾ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. 

ಈಕೆಯ ಕೆಲಸಕ್ಕೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಹಪಾಠಿಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಸಬಿತಾ ತೇರ್ಗಡೆ ಹೊಂದಿದ್ದಾಳೆ. ಚೆನ್ನಾಗಿ ಓದಿ ಸರಕಾರಿ ಕೆಲಸ  ಗಿಟ್ಟಿಸಿಕೊಳ್ಳುವ ಆಸೆಯನ್ನು ಸಬಿತಾ ಹೊಂದಿದ್ದಾಳಂತೆ.

Ads on article

Advertise in articles 1

advertising articles 2

Advertise under the article

holige copy 1.jpg