
ಬಂಟ್ವಾಳ ಕಾರಿಂಜೇಶ್ವರ ಕ್ಷೇತ್ರದಲ್ಲಿ ಅನ್ಯಮತೀಯ ಯುವಕರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ- ನಾಲ್ವರ ಬಂಧನ
11/03/2021 10:10:00 PM
ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಾಲಯದೊಳಗೆ ಐವರು ಯುವಕರ ತಂಡ ಶೂ ಧರಿಸಿ ಪ್ರವೇಶಿಸಿ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಪೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಶೇರ್ ರೆಹಮಾನ್ (20), ಇಸ್ಮಾಯಿಲ್ ಅರ್ಹ ಮಾಜ್ (22), ಮುಹಮ್ಮದ್ ತಾನಿಶ್ (19), ಮೊಹಮ್ಮದ್ ರಶಾದ್ (19) ಬಂಧಿತರು.
ಘಟನೆ ವಿವರ;
ಕಾರಿನಲ್ಲಿ ಮೋಜಿ ಮಸ್ತಿ ಮಾಡಲು ಬಂದಿದ್ದ ಐವರು ಯುವಕರ ಶ್ರೀ ಕಾರಿಂಜೇಶ್ವರ ದೇವಾಲಯದ ಒಳಗಡೆಯೇ ಶೂ ಧರಿಸಿ ಪ್ರವೇಶ ಮಾಡಿದ್ದರು. ಇದರ ಫೋಟೊ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಂಟ್ವಾಳ ತಾಲೂಕು ಹಿಂದು ಜಾಗರಣ ವೇದಿಕೆ ಘಟನೆಯನ್ನು ಖಂಡಿಸಿದ್ದು, ಕಾನೂನು ಸಮರಕ್ಕೆ ಸಿದ್ಧವಾಗುವುದಾಗಿ ಸೂಚನೆ ನೀಡಿದೆ.
ಈ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಘಟನೆಯ ಬಗ್ಗೆ ತನಿಖೆಗೊಳಪಡಿಸಬೇಕು. ಸಮಾಜದಲ್ಲಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವಂತವರ ವಿರುದ್ಧ ಕಠಿಣ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.