Job in BBMP- ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ






ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 


ಆಸಕ್ತ ಅಭ್ಯರ್ಥಿಗಳು ನವೆಂಬರ್ 15ರಂದು ನಡೆಯಲಿರುವ ನೇರ ನೇಮಕಾತಿ ಸಂದರ್ಶನದಲ್ಲಿ ಭಾಗವಹಿಸಲು ಕೋರಲಾಗಿದೆ.



ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅಡಿಯಲ್ಲಿ ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವ್ಯಾಪ್ತಿಯಲ್ಲಿ ಖಾಲಿ ಇರುವ ಈ ಹುದ್ದೆಗಳನ್ನು ಅಲಂಕರಿಸಲು ಪದವೀಧರರಿಗೆ ಸುವರ್ಣಾವಕಾಶವಿದ್ದು, ಬಿ.ಟೆಕ್, ಎಂಬಿಎ ಮತ್ತು ಎಂಕಾಂ ಪದವೀಧರರು, ಸ್ನಾತಕೋತ್ತರ ಪದವೀಧರರು ಈ ಅವಕಾಶವನ್ನು ಬಳಸಬಹುದಾಗಿದೆ.



ಹೆಚ್ಚಿನ ವಿವರ ಈ ರೀತಿ ಇದೆ.


ಸಂಸ್ಥೆ: ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)


ಖಾಲಿ ಇರುವ ಹುದ್ದೆ: 4 ಹುದ್ದೆ


ಹುದ್ದೆಯ ಸ್ಥಳ: ಬೆಂಗಳೂರು



ಹುದ್ದೆಯ ಹೆಸರು

1) ಸಿಟಿ ಪ್ರೋಗ್ರಾಂ ಮ್ಯಾನೇಜರ್

2) ಸಿಟಿ ಅಕೌಂಟೆಂಟ್ ಮ್ಯಾನೇಜರ್

3) ಐಟಿ ಕನ್ಸಲ್ಟೆಂಟ್/ಡಾಟಾ ಮ್ಯಾನೇಜರ್

4) ಎಪಿಡಮಾಲಜಿಸ್ಟ್


ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಯಾವುದೇ ಪರಿಗಣಿತ ವಿಶ್ವವಿದ್ಯಾನಿಲಯದಿಂದ ಬಿ.ಟೆಕ್, ಎಂಬಿಎ ಮತ್ತು ಎಂಕಾಂ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.



ವಯೋಮಿತಿ: ಕನಿಷ್ಟ 18ರಿಂದ ಗರಿಷ್ಟ 35



ಆಸಕ್ತ ಅಭ್ಯರ್ಥಿಗಳು ತಮ್ಮ ನೇಮಕಾತಿಗೆ ಸಂಬಂಧಿಸಿದ (ಶೈಕ್ಷಣಿಕ/ಹಾಗೂ ಇತರ) ಸೂಕ್ತ ದಾಖಲೆಗಳ ಜೊತೆ ಈ ಕೆಳಗಿನ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.



ಸಂದರ್ಶನದ ವಿವರ ಹೀಗಿದೆ.


1) ಸಿಟಿ ಪ್ರೋಗ್ರಾಂ ಮ್ಯಾನೇಜರ್ - ನವೆಂಬರ್ 15ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ


2) ಸಿಟಿ ಅಕೌಂಟೆಂಟ್ ಮ್ಯಾನೇಜರ್- ನವೆಂಬರ್ 16ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ


3) ಐಟಿ ಕನ್ಸಲ್ಟೆಂಟ್/ಡಾಟಾ ಮ್ಯಾನೇಜರ್ ನವೆಂಬರ್ 15ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ


4) ಎಪಿಡಮಾಲಜಿಸ್ಟ್- ನವೆಂಬರ್ 16ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ


ಹೆಚ್ಚಿನ ವಿವರಗಳಿಗೆ 080-22110445 ಹಾಗೂ cpmobbmp@gmail.com ನ್ನು ಸಂಪರ್ಕಿಸಿ...



ಬಿಬಿಎಂಪಿ ವೆಬ್‌ಸೈಟ್ ಲಿಂಕ್ ಇಲ್ಲಿದೆ...

https://bbmp.gov.in/home