-->

Job fair in Mangaluru University-  ಮಂಗಳೂರು ವಿಶ್ವವಿದ್ಯಾನಿಲಯ: ನವಂಬರ್ 16 & 17 ರಂದು ಉದ್ಯೋಗಮೇಳ

Job fair in Mangaluru University- ಮಂಗಳೂರು ವಿಶ್ವವಿದ್ಯಾನಿಲಯ: ನವಂಬರ್ 16 & 17 ರಂದು ಉದ್ಯೋಗಮೇಳ

ಮಂಗಳೂರು ವಿ.ವಿ: ನವಂಬರ್ 16 & 17 ರಂದು ಉದ್ಯೋಗಮೇಳ





ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕ/ಸ್ನಾತಕೋತ್ತರ ಪದವೀಧರರಿಗೆ ಮತ್ತು ಐಟಿಐ, ಡಿಪ್ಲೋಮಾ ಹಾಗೂ ತಾಂತ್ರಿಕ ಪದವೀಧರರಿಗೆ ವಿಶ್ವವಿದ್ಯಾನಿಲಯ ತರಬೇತಿ ಮತ್ತು ಉದ್ಯೋಗ ಕೋಶ, ಹಾಗೂ ಉದ್ಯೋಗ ಮಾಹಿತಿ ಮಾರ್ಗದರ್ಶನ ಕೇಂದ್ರದ ವತಿಯಿಂದ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ನವೆಂಬರ್‌ 16 ಮತ್ತು 17 (ಮಂಗಳವಾರ ಮತ್ತು ಬುಧವಾರ) ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಉದ್ಯೋಗಮೇಳ ಆಯೋಜಿಸಲಾಗಿದೆ.




ಇನ್ಫೋಸಿಸ್, ಹೆಚ್‌ಎಸ್‌ಬಿಸಿ, ಕೋಟಕ್‌ ಮಹೇಂದ್ರ, ಯುರೇಕಾ ಫೋರ್ಬ್ಸ್‌, ಜೆಟ್‌ಕಿಂಗ್‌, ವಿನ್‌ಮ್ಯಾನ್ ಸಾಫ್ಟ್‌ವೇರ್‌, ಮಾಂಡವಿ ಮೋಟರ್ಸ್‌, ಶ್ರೀಸಾಯಿ ಎಂಟರ್ಪ್ರೈಸಸ್‌, ವಿ.ಕೆ. ಫರ್ನೀಚರ್‌ ಆಂಡ್‌ ಎಲೆಕ್ಟ್ರಾನಿಕ್ಸ್‌, ಜೋಯ್ ಅಲುಕಾಸ್, ಎ.ಜೆ. ಹಾಸ್ಪಿಟಲ್‌ ಆಂಡ್‌ ರಿಸರ್ಚ್‌ ಸೆಂಟರ್‌, ದಿಯಾ ಸಿಸ್ಟಮ್ಸ್‌, ಕೆಫೆ ಕಾಫಿ ಡೇ, ಆಕ್ಸೆಂಚರ್‌ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕಂಪನಿಗಳು ತಮ್ಮ ಭಾಗವಹಿಸುವಿಕೆಯನ್ನು ಈಗಾಗಲೇ ಖಚಿತಪಡಿಸಿವೆ.




ಆಸಕ್ತ ಅಭ್ಯರ್ಥಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವವರು https://docs.google.com/forms/d/e/1FAIpQLSeHpg5Tj2y7FjfynQVBpvX-bvkhGbuY-rtd16rYoVz19YwBHw/viewform?usp=sf_link. ಕೊಂಡಿಯನ್ನು ಬಳಸಿಕೊಳ್ಳಬಹುದು. 



ಅಂಕಪಟ್ಟಿಯ ಮೂಲಪ್ರತಿ, ಭಾವಚಿತ್ರಗಳು ಮತ್ತು ತಮ್ಮ ಪರಿಚಯಪತ್ರದ (ಬಯೋಡೇಟಾ) ಕನಿಷ್ಠ ನಾಲ್ಕು ಪ್ರತಿಗಳನ್ನು ತರುವುದು ಕಡ್ಡಾಯವಾಗಿದೆ. ಅರ್ಹ ಪುರುಷ/ಮಹಿಳಾ ಅಭ್ಯರ್ಥಿಗಳನ್ನು ಕಂಪನಿಗಳು ನೇರ ನೇಮಕಾತಿ ಮಾಡಿಕೊಳ್ಳಲಿವೆ. ಆನ್‌ಲೈನ್‌ನಲ್ಲಿ ಸಂದರ್ಶನ ಪ್ರಕ್ರಿಯೆಗೂ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ಅವಕಾಶ ಸಿಗದವರು ಎರಡನೇ ದಿನ ಭಾಗವಹಿಸಬಹುದು ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.


ಉದ್ಘಾಟನಾ ಕಾರ್ಯಕ್ರಮ:

ನವೆಂಬರ್‌ 16 ರಂದು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಯೋಗಮೇಳದ ಉದ್ಘಾಟನೆ ಜರುಗಲಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 



ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್‌, ಸಿಐಐ ಮಾಜಿ ಅಧ್ಯಕ್ಷ ಪ್ರಕಾಶ್‌ ರಾವ್‌ ಕಲ್ಬಾವಿ, ಮಂಗಳಾ ಅಲ್ಯುಮಿನಿ ಅಸೋಸಿಯೇಶನ್‌ ಅಧ್ಯಕ್ಷ ದಿನೇಶ್‌ ಕುಮಾರ್‌ ಆಳ್ವ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ವಿನಯರಾಜ್‌ ಎ ಸಿ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.



ಹೆಚ್ಚಿನ ಮಾಹಿತಿಗಾಗಿ:

ಶಾರದಾ ಸೋಮಯಾಜಿ: 63630 22303

ಗುರುಪ್ರಸಾದ್ ಟಿಎನ್: 99649 39267

Ads on article

Advertise in articles 1

advertising articles 2

Advertise under the article