-->
ಮುಂಡು, ಶರ್ಟ್ ನಲ್ಲಿ‌ ಹೋಗಿ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ  ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ!

ಮುಂಡು, ಶರ್ಟ್ ನಲ್ಲಿ‌ ಹೋಗಿ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ!


ಮಂಗಳೂರು; ಮಂಗಳೂರಿನ ಹೆಮ್ಮೆಯ ಹರೇಕಳ ಹಾಜಬ್ಬ ಅವರು ದೇಶದ ಪ್ರತಿಷ್ಠಿತ ಪ್ರಶಸ್ತಿ ಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಇಂದು ಸ್ವೀಕರಿಸಿದರು.

ದೇಶದ ಅತ್ಯುನ್ನತ ಗೌರವಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ಯನ್ನು ಪಡೆದ ಹರೇಕಳ ಹಾಜಬ್ಬ ಅವರು ಸರಳಜೀವಿ. ಮುಂಡು ಮತ್ತು ಪಂಚೆಯಲ್ಲಿ ಸದಾ ಕಾಣಸಿಗುವ ಹರೇಕಳ ಹಾಜಬ್ಬ ಅವರು ಇಂದು ಪದ್ಮಶ್ರೀ ಪ್ರಶಸ್ತಿ ಪಡೆಯುವ ವೇಳೆಯಲ್ಲಿಯೂ ಅದೇ ದಿರಿಸಿನಲ್ಲಿ ಕಾಣಿಸಿಕೊಂಡರು.

ಕಿತ್ತಲೆ ಮಾರಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಶಾಲೆ ನಿರ್ಮಾಣಕ್ಕಾಗಿ ಶ್ರಮ‌ಪಟ್ಟಿದ್ದರು. ಅದರಲ್ಲಿ ಯಶಸ್ವಿಯಾದ ಅವರ ಪ್ರಯತ್ನ ಕ್ಕೆ ದೇಶವಿದೇಶಗಳಲ್ಲಿ ಗೌರವವು ಸಿಕ್ಕಿತ್ತು.

2020 ರಲ್ಲಿ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದ್ದರೂ ಕೊರೊನಾ ಕಾರಣದಿಂದ ಪ್ರದಾನ ಮಾಡಿರಲಿಲ್ಲ. ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹರೇಕಳ ಹಾಜಬ್ಬ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Ads on article

Advertise in articles 1

advertising articles 2

Advertise under the article