-->

Hajabba - ಪದ್ಮಶ್ರೀ ಹರೇಕಳ ಹಾಜಬ್ಬರನ್ನು 6 ವರ್ಷಗಳ ಹಿಂದೆಯೇ ಸಮ್ಮಾನಿಸಿದ್ದ ಡಿ ವರ್ಗ ಸರಕಾರಿ ನೌಕರರ ಸಂಘ

Hajabba - ಪದ್ಮಶ್ರೀ ಹರೇಕಳ ಹಾಜಬ್ಬರನ್ನು 6 ವರ್ಷಗಳ ಹಿಂದೆಯೇ ಸಮ್ಮಾನಿಸಿದ್ದ ಡಿ ವರ್ಗ ಸರಕಾರಿ ನೌಕರರ ಸಂಘ

ಪದ್ಮಶ್ರೀ ಹರೇಕಳ ಹಾಜಬ್ಬರನ್ನು 6 ವರ್ಷಗಳ ಹಿಂದೆಯೇ ಸಮ್ಮಾನಿಸಿದ್ದ ಡಿ ವರ್ಗ ಸರಕಾರಿ ನೌಕರರ ಸಂಘ





ಪದ್ಮಶ್ರೀ ಹರೇಕಳ ಹಾಜಬ್ಬರನ್ನು 6 ವರ್ಷಗಳ ಹಿಂದೆಯೇ ಗುರುತಿಸಿ ಸಮ್ಮಾನಿಸಿದ್ದ ದ.ಕ. ಜಿಲ್ಲಾ ಡಿ ವರ್ಗ ಸರಕಾರಿ ನೌಕರರ ಸಂಘ


ಕಿತ್ತಳೆ ಹಣ್ಣುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರು ತನ್ನ ಊರಿಗೆ ಶಾಲೆಯೊಂದು ಬೇಕೆ೦ಬ ಕನಸನ್ನು ನನಸಾಗಿಸಿ 'ಅಕ್ಷರ ಸಂತ' ನೆಂಬ ಬಿರುದು ಪಡೆದು ಭಾರತದ ನಾಲ್ಕನೆಯ ಉನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವವನ್ನು ಪಡೆದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.


ಹರೇಕಳ ಹಾಜಬ್ಬ ಅವರ ಸೇವೆಯನ್ನು ಗುರುತಿಸಿ 6 ವರ್ಷಗಳ ಹಿಂದೆ ಅಂದರೆ ದಿನಾಂಕ 2.10.2015 ರ ಗಾಂಧಿ ಜಯಂತಿಯ ದಿನದಂದು ಅವರನ್ನು ಸಮ್ಮಾನಿಸುವ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯ ಡಿ ವರ್ಗದ ಸರಕಾರಿ ನೌಕರರ ಸಂಘದ ವತಿಯಿಂದ ನಡೆಸಿತ್ತು.



ಈ ಸಮಾರಂಭದಲ್ಲಿ ಹರೇಕಳ ಹಾಜಬ್ಬ ಅವರಿಗೆ ಸ್ವಂತ ಮನೆಯನ್ನು ನಿರ್ಮಿಸುವ ಸಲುವಾಗಿ ಸಂಘದ ವತಿಯಿಂದ ಹತ್ತು ಸಾವಿರ ರೂಪಾಯಿ ನಗದು ನೀಡಲಾಯಿತು.





ಅದೇ ಸಂದರ್ಭದಲ್ಲಿ ಡಿ ಗ್ರೂಪ್ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ ಇಪ್ಪತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಕಮಲಾಕ್ಷ ಅವರನ್ನು ಸನ್ಮಾನಿಸಿ ಅವರಿಗೆ ಹತ್ತು ಸಾವಿರ ರೂಪಾಯಿ ನಗದು ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನಿವೃತ್ತ ರಾದ ಶ್ರೀ ಜಾರ್ಜ್ ಪಿಂಟೊ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.


ಸಮಾರಂಭವನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾಗಿದ್ದ ಮೊಯ್ದಿನ್ ಬಾವ ಅವರು ಉದ್ಘಾಟಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಪ್ರಕಾಶ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿದ್ದರು.


ದ.ಕ. ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಕ್ರಿಯಾಶೀಲ ಅಧ್ಯಕ್ಷರಾಗಿದ್ದ ಶ್ರೀ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಅವರು ಈ ಕಾರ್ಯಕ್ರಮದ ರೂವಾರಿಯಾಗಿದ್ದರು.

Photo Courtesy: Belle Vision


Ads on article

Advertise in articles 1

advertising articles 2

Advertise under the article