-->
ಯುವಕನೊಂದಿಗೆ ವಿವಾಹಿತೆಯನ್ನು ಕಟ್ಟಿ ಹಾಕಿ ಪೌರುಷ ಮೆರೆದ ಪತಿ - ಮೈದುನ ದೂರು ದಾಖಲಾಗುತ್ತಿದ್ದಂತೆ ಪರಾರಿ

ಯುವಕನೊಂದಿಗೆ ವಿವಾಹಿತೆಯನ್ನು ಕಟ್ಟಿ ಹಾಕಿ ಪೌರುಷ ಮೆರೆದ ಪತಿ - ಮೈದುನ ದೂರು ದಾಖಲಾಗುತ್ತಿದ್ದಂತೆ ಪರಾರಿ

ಮೈಸೂರು: ಯುವಕ ಹಾಗೂ ವಿವಾಹಿತೆಯನ್ನು ವಿದ್ಯುತ್​ ಕಂಬಕ್ಕೆ ಕಟ್ಟಿ ಥಳಿಸಿ, ಹಿಂಸೆ ಕೊಟ್ಟಿರುವವ ವಿರುದ್ಧ ದೂರು ದಾಖಲಾಗಿದ್ದು, ಮೊನ್ನೆ ಪೌರುಷ ಮೆರೆದಿದ್ದವರು ನಿನ್ನೆ ತಲೆ ಮರೆಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಮ್ಮರಗಾಲದಲ್ಲಿ ನ. 25ರಂದು ಈ ಅಮಾನವೀಯ ಘಟನೆ ನಡೆದಿತ್ತು. ಅಂದು ಈ ವಿವಾಹಿತೆಯ ಮನೆಗೆ ಪರಿಚಿತ ಯುವಕನೋರ್ವನು ಬಂದಿದ್ದನು. ಆಗ ಮನೆಗೆ ಬಂದ ಯುವತಿಯ ಪತಿ ಹಾಗೂ ಮೈದುನು ಯುವಕನ ಜೊತೆಗೆ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿ, ಹಿಂಸೆ ನೀಡುದ್ದರು. ಇಡೀ ದಿನ ಹೀಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿ ಹಿಂಸೆ ಕೊಟ್ಟಿದ್ದವರನ್ನು ನಿನ್ನೆ ಬಿಚ್ಚಿದ್ದರು. ಈ ಬಗ್ಗೆ ಯುವತಿ ನಿನ್ನೆ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ. 

ಇದೀಗ ಪತಿ ರವಿ ಹಾಗೂ ಮೈದುನ ಚಂದ್ರು ವಿರುದ್ಧ ಸಂತ್ರಸ್ತ ಯುವತಿ ಕೌವಲಂದೆ ಪೊಲೀಸ್ ಠಾಣೆಯಲ್ಲಿ  ವಿರುದ್ಧ ದೂರು ನೀಡಿದ್ದಾಳೆ. ಇದೀಗ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ. 

ಈ ಬಗ್ಗೆ ದೂರು ನೀಡಿರುವ ಯುವತಿ "ಈ ಹಿಂದೆ ತಾನು ಕೊಡಗಿಗೆ ಕಾಫಿತೋಟಕ್ಕೆ ಕೆಲಸಕ್ಕೆ ಹೋಗಿದ್ದ ಸಂದರ್ಭ ಅಲ್ಲಿ ನೇರಳೆ ಗ್ರಾಮದ, ನಮ್ಮದೇ ಜಾತಿಯ ವಿಷ್ಣು ಎಂಬಾತನ ಪರಿಚಯವಾಗಿತ್ತು. ನ. 25ರಂದು ತಾಯಿ ಮನೆಯಿಂದ ನಾನು ಹಾಲಿನ ಡೇರಿಗೆ ಹೋಗಿ ಹಾಲು ತೆಗೆದುಕೊಂಡು ಬರುತ್ತಿರುವಾಗ ವಿಷ್ಣು ಸಿಕ್ಕಿದ್ದಾನೆ. ಪರಿಚಯವಿದ್ದ ಹಿನ್ನೆಲೆಯಲ್ಲಿ ಮನೆಗೆ ಕರೆದು ಟೀ ಕುಡಿದು ಹೋಗುವಂತೆ ಹೇಳಿದ್ದೆ. ಹಾಗೆ ವಿಷ್ಣು ಮನೆಗೆ ಬಂದಿದ್ದಾಗ ಪತಿ ರವಿ ಹಾಗೂ ಮೈದುನ ಮನೆಗೆ ನುಗ್ಗಿ ನಮ್ಮಿಬ್ಬರನ್ನು ಹೊರಕ್ಕೆ ಎಳೆದು ಹೊಡೆದು, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಅವರಿಬ್ಬರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು" ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಪತಿ ಕೆಲವು ವರ್ಷಗಳ ಹಿಂದೆ ಆಕೆಯನ್ನು ತೊರೆದಿದ್ದಾನೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article

holige copy 1.jpg