
ಪತಿಗೆ ಡೈವೊರ್ಸ್ ನೀಡಿ ಶ್ವಾನದೊಂದಿಗೆ ವಿವಾಹವಾದ ಮಹಿಳೆ: ವಿಚಿತ್ರವೆನಿಸಿದರೂ ಸತ್ಯ ಘಟನೆ
Tuesday, November 23, 2021
ಲಂಡನ್: ಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಆಗುವ ಘಟನೆ. ಆದ್ದರಿಂದ ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳಿರುತ್ತದೆ. ತನ್ನನ್ನು ಮದುವೆಯಾಗುವ ಗಂಡು ಹಾಗಿರಬೇಕು ಹೀಗಿರಬೇಕು ಎಂದು ಯುವಕ-ಯುವತಿಯರಲ್ಲಿ ಅವರದ್ದೇ ಆದ ಬಯಕೆಗಳಿರುತ್ತವೆ. ಆದರೆ ಇಲ್ಲೊಬ್ಬ ಮಹಿಳೆ ತಾನು ಕಟ್ಕೊಂಡ ಗಂಡನಿಗೇ ಡೈವೋರ್ಸ್ ಕೊಟ್ಟು ತಾನು ಸಾಕಿರುವ ಶ್ವಾನವನ್ನೇ ವಿವಾಹವಾಗಿದ್ದಾಳೆ.
ಹೌದು, ಈ ಘಟನೆಯನ್ನು ನೋಡುವಾಗ ವಿಚಿತ್ರ ಎನ್ನಿಸಿದರೂ ಇದು ಸತ್ಯ ಘಟನೆ. ಇಂತಹ ವಿಚಿತ್ರ ಮದುವೆ ನಡೆದಿರೋದು ಲಂಡನ್ನ ಕ್ರಯೋಷಿಯಾದಲ್ಲಿ. ಶ್ವಾನವನ್ನೇ ವರಿಸಿರುವ ಮಹಿಳೆ ಹೆಸರು ಅಮಂಡಾ ರಾಡ್ಜರ್ಸ್. ಇದಕ್ಕೂ ಮೊದಲು ವ್ಯಕ್ತಿಯೊಬ್ಬರ ಜತೆ ಅಮಂಡಾ ರಾಡ್ಜರ್ಸ್ ವಿವಾಹವಾಗಿತ್ತು. ಆದರೆ ಇದೀಗ ಆಕೆ ಪತಿಗೆ ಡೈವೋರ್ಸ್ ನೀಡಿ ತನ್ನ ಸಾಕು ನಾಯಿಯೊಂದಿಗೆ ಕ್ರೈಸ್ತ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾಳೆ.
ತಮ್ಮ ಸಂಬಂಧಿಕರು, ಸ್ನೇಹಿತರನ್ನೂ ಮದುವೆಗೆ ಆಹ್ವಾನಿಸಿದ್ದಳು. 200ಕ್ಕೂ ಅಧಿಕ ಮಂದಿ ಈಕೆ ಹಿತೈಷಿಗಳು ಈ ಮದುವೆಯಲ್ಲಿ ಪಾಲ್ಗೊಂಡು ಮಹಿಳೆ ಮತ್ತು ನಾಯಿಗೆ ಶುಭಕೋರಿದ್ದಾರೆ.
ಶ್ವಾನದೊಂದಿಗೆ ವಿವಾಹವಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಮಂಡಾ ರಾಡ್ಜರ್ಸ್, ನಾನು ನನ್ನ ಪತಿಯಿಂದ ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗಲಿಲ್ಲ. ನನ್ನ ಮುದ್ದಿನ ನಾಯಿ ಶಬಾ ಯಾವಾಗಲೂ ನನ್ನ ಸಂತೋಷವನ್ನೇ ಬಯಸುತ್ತಿತ್ತು. ಆದ್ದರಿಂದ ನಾನು ಶಬಾನೊಂದಿಗೆ "ತನ್ನನ್ನು ಮದುವೆಯಾಗುವೆಯಾ ಎಂದು ಕೇಳಿಕೊಂಡೆ. ಬಾಲ ಅಲ್ಲಾಡಿಸಿ ಶ್ವಾನ ಒಪ್ಪಿಗೆ ಕೊಟ್ಟಿದೆ" ಎಂದಿದ್ದಾರೆ.
ಒಟ್ಟಿನಲ್ಲಿ ಅಮಂಡಾ ರಾಡ್ಜರ್ಸ್ ಶ್ವಾನದೊಂದಿಗೆ ಮದುವೆ ಆಗುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.