-->

ಬಾಲಕಿಯ ಮೇಲೆ ಮೊಬೈಲ್ ಕಳವು ಆರೋಪ ಹೊರಿಸಿ ಸಾರ್ವಜನಿಕರ ಮುಂಭಾಗ ಅವಮಾನಿಸಿದ ಮಹಿಳಾ ಪೊಲೀಸ್ ಅಧಿಕಾರಿಗೆ ಕೇರಳ ಹೈಕೋರ್ಟ್ ಶಾಕ್

ಬಾಲಕಿಯ ಮೇಲೆ ಮೊಬೈಲ್ ಕಳವು ಆರೋಪ ಹೊರಿಸಿ ಸಾರ್ವಜನಿಕರ ಮುಂಭಾಗ ಅವಮಾನಿಸಿದ ಮಹಿಳಾ ಪೊಲೀಸ್ ಅಧಿಕಾರಿಗೆ ಕೇರಳ ಹೈಕೋರ್ಟ್ ಶಾಕ್

ತಿರುವನಂತಪುರಂ: 8 ವರ್ಷದ ಬಾಲಕಿ ಹಾಗೂ ಆಕೆಯ ತಂದೆಯ ವಿರುದ್ಧ ಮೊಬೈಲ್​ ಕಳವಿನ ಆರೋಪ ಹೊರಿಸಿ, ಸಾರ್ವಜನಿಕರ ಎದುರೇ ಅವಮಾನಿಸಿದ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಕೇರಳ ಹೈಕೋರ್ಟ್​ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. 

ಕೋರ್ಟ್​ ಮೆಟ್ಟಿಲೇರಿರುವ ಬಾಲಕಿಯು 50 ಲಕ್ಷ ರೂ. ಪರಿಹಾರ ಕೊಡಲು ನಿರ್ದೇಶನ ಮಾಡುವಂತೆ ಮನವಿ ಮಾಡಿದ್ದಳು. ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿಗೆ ಹೋಗಿ ಅನೇಕ ಬಾರಿ ಮನವಿ ಮಾಡಿದ್ದರೂ ಮಹಿಳಾ ಪೊಲೀಸ್​ ಅಧಿಕಾರಿ ಮೇಲೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಕೋರ್ಟ್ ಕದ ತಟ್ಟಿದ್ದೇವೆ. ಕಳುವು ಆರೋಪ ಹೊರಿಸಿ ಸಾರ್ವಜನಿಕರ ಮುಂಭಾಗವೇ ಅವಮಾನಿಸಿರುವ ಆಘಾತದಿಂದ ಖಿನ್ನತೆಗೆ ಜಾರಿ ಆಪ್ತ ಸಮಾಲೋಚನೆಯನ್ನು ಪಡೆದಿದ್ದೇನೆ. ಈಗಲೂ ಮಹಿಳಾ ಅಧಿಕಾರಿಯ ಚುಚ್ಚು ಮಾತುಗಳು ತೀವ್ರ ನೋವುಂಟು ಮಾಡುತ್ತಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಬಾಲಕಿ ಉಲ್ಲೇಖಿಸಿದ್ದಳು. 

ನಿನ್ನೆಯೇ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ತಪ್ಪಿತಸ್ಥ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ತೆಗೆದುಕೊಂಡ ಕ್ರಮವನ್ನು ತಿಳಿಸುವಂತೆ ಪೊಲೀಸ್​ ಇಲಾಖೆಗೆ ಸೂಚನೆ ನೀಡಿದೆ. ಅಲ್ಲದೆ ಈ ಪ್ರಕರಣವನ್ನು ‘ಸಣ್ಣ’ ಘಟನೆ ಎಂದು ಸುಮ್ಮನಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು.​ ಪೊಲೀಸ್ ಅಧಿಕಾರಿ ರೆಜಿತಾ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿರುವ ನ್ಯಾಯಾಲಯ, ಪ್ರಕರಣವನ್ನು ನವೆಂಬರ್ 29ಕ್ಕೆ ಮುಂದೂಡಿದೆ. 

ಘಟನೆಯ ಹಿನ್ನೆಲೆ:

ಆಗಸ್ಟ್​ 27ರಂದು ಈ ಘಟನೆ ನಡೆದಿದೆ. 38 ವರ್ಷದ ಜಯಚಂದ್ರನ್, ತಮ್ಮ 8 ವರ್ಷದ ಮಗಳೊಂದಿಗೆ ಇಸ್ರೋ ಘಟಕಕ್ಕೆ ಉಪಕರಣಗಳನ್ನು ಸಾಗಿಸುವ ಬೃಹತ್ ಟ್ರೈಲರ್‌ನ ಚಲನೆಯನ್ನು ವೀಕ್ಷಿಸಲು ತಿರುವನಂತಪುರಂನ ಅಟ್ಟಿಂಗಲ್ ಬಳಿಯ ಹೊರವಲಯದ ಮುಖ್ಯ ರಸ್ತೆಗೆ ಹೋಗಿದ್ದರು. ಈ ವೇಳೆ ಕೇರಳ ಪೊಲೀಸ್​ ಇಲಾಖೆಯ ಪಿಂಕ್ ಪೊಲೀಸ್​ ಘಟಕದ ಮಹಿಳಾ ಪೊಲೀಸ್​ ಅಧಿಕಾರಿ ರೆಜಿತಾ​ ತಮ್ಮ ಮೊಬೈಲ್​ ಕಳೆದುಹೋಗಿದೆ ಜಯಚಂದ್ರನ್​ ಅವರ ತಪಾಸಣೆ ನಡೆಸಿದ್ದಾರೆ. ಮೊಬೈಲ್​ ಕಳೆದು ಹೋಗುವ ಮುನ್ನ ರೆಜಿತಾ ಅವರಿದ್ದ ಗಸ್ತುವಾಹನದ ಪಕ್ಕದಲ್ಲೇ ಜಯಚಂದ್ರನ್​ ಇದ್ದಿದ್ದರಿಂದ ಅವರ ಮೇಲೆ ಆಕೆಗೆ ಅನುಮಾನ ಮೂಡಿತ್ತು. ಮೊಬೈಲ್​ ಕದ್ದಿರುವುದು ಅವರೇ ಎಂದು ಭಾವಿಸಿದ್ದ ರೆಜಿತಾ, ಸಾರ್ವಜನಿಕರ ಮುಂಭಾಗವೇ ಬಾಲಕಿ ಹಾಗೂ ಆಕೆಯ ತಂದೆಗೆ ಕೆಟ್ಟ ಪದಗಳಿಂದ ಬೈದು ಅವಮಾನಿಸಿದ್ದರು. ಅಲ್ಲದೆ ಹತ್ತಿರದ ಪೊಲೀಸ್​ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದ್ದಾರೆ. 

ಪರಿಣಾಮ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಇದಾದ ಬಳಿಕ ರೆಜಿತಾ ಅವರ ಮೊಬೈಲ್​ ಪೊಲೀಸ್​ ವಾಹನದಲ್ಲೇ ಪತ್ತೆಯಾಗಿದೆ. ಪೂರ್ತಿ  ಘಟನೆಯ ದೃಶ್ಯವನ್ನು ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋ ವೈರಲ್​ ಸಹ ಆಗಿದೆ. 

ಇದಾದ ಬಳಿಕ ತಮಗಾದ ಅವಮಾನಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗಸ್ಟ್​ 31ರಂದು ಪೊಲೀಸ್​ ಮುಖ್ಯಸ್ಥ ಅನಿಲ್​ ಕಾಂತ್​ ಬಳಿ ತೆರಳಿ ಮಹಿಳಾ ಪೊಲೀಸ್​ ಅಧಿಕಾರಿ ರೆಜಿತಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಯಚಂದ್ರನ್​ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ತನ್ನನ್ನು ಹಾಗೂ ಮಗಳನ್ನು ಅವಮಾನಿಸಿದ್ದರಿಂದ ಅವಳ ಆಘಾತದಿಂದ ಖಿನ್ನತೆಗೆ ಜಾರಿದ್ದಾಳೆ ಎಂದು ಜಯಚಂದ್ರನ್​ ದೂರು ನೀಡುತ್ತಾರೆ.

 ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅನಿಲ್​ ಕಾಂತ್​ ಭರವಸೆ ನೀಡುತ್ತಾರೆ. ಅಲ್ಲದೆ, ತನಿಖೆಗೆ ಆದೇಶ ನೀಡುತ್ತಾರೆ. ಆದರೂ ರೆಜಿತಾ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಒಳ್ಳೆಯ ಜಾಗಕ್ಕೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮತ್ತು ದೂರುಗಳನ್ನು ನೀಡಿದರೂ ಜಯಚಂದ್ರನ್​ ಕುಟುಂಬಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೊನೆಗೆ ನ್ಯಾಯಾಲಯ ಕದ ತಟ್ಟಿರುವ ಜಯಚಂದ್ರನ್ ಕುಟುಂಬ, ರೆಜಿತಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

Ads on article

Advertise in articles 1

advertising articles 2

Advertise under the article